ಸಂಬಳ ಕೇಳಿದ ಕಾರ್ಮಿಕನಿಗೆ ಕತ್ತಿಯಿಂದ ಇರಿದ ರಬ್ಬರ್ ತೋಟದ ಮಾಲಿಕ! - Mahanayaka

ಸಂಬಳ ಕೇಳಿದ ಕಾರ್ಮಿಕನಿಗೆ ಕತ್ತಿಯಿಂದ ಇರಿದ ರಬ್ಬರ್ ತೋಟದ ಮಾಲಿಕ!

rubber tapping knife
23/03/2021

ಕಾರ್ಕಳ:  ಸಂಬಳ ಕೇಳಿದ ಕಾರ್ಮಿಕನನ್ನು ರಬ್ಬರ್ ತೋಟದ ಮಾಲಿಕ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಇರಿದ ಘಟನೆ ಇಲ್ಲಿನ ತೆಳ್ಳಾರು ಮಾವಿನಕಟ್ಟೆಯ ನೀರಿನ ಟ್ಯಾಂಕ್ ಬಳಿಯಲ್ಲಿ ನಡೆದಿದೆ.

ತೆಳ್ಳಾರಿನ  ರಬ್ಬರ್ ತೋಟದ ಮಾಲಕ ಶಿಜು ಎಂಬಾತ ಹಾಗೂ ಕಾರ್ಮಿಕ ಶ್ಯಾಮ ನಡುವೆ ಸಂಬಳದ ವಿಚಾರದಲ್ಲಿ ಗಲಾಟೆ ನಡೆದಿದೆ. ಗಲಾಟೆಯ ವೇಳೆ ಮಾತಿಗೆ ಮಾತು ಬೆಳೆದು ಶಿಜು-ಶ್ಯಾಮಗೆ ಕತ್ತಿಯಿಂದ ಚುಚ್ಚಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಶ್ಯಾಮನನ್ನು  ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆದೊಯ್ಯಲಾಗಿದೆ. ಬಳಿಕ ಅಲ್ಲಿಂದ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ರಬ್ಬರ ತೋಟ ಮಾಲಿಕ ಶಿಜು ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ