ಕಾರ್ಮಿಕರ ಖಾತೆಗಳಿಗೆ 1,500 ರೂ. ಜಮಾ ಮಾಡಿದ ಮಹಾರಾಷ್ಟ್ರ ಸರ್ಕಾರ!

ಮುಂಬೈ: ಮಹಾರಾಷ್ಟ್ರ ಸರ್ಕಾರವು ಕೇವಲ ಲಾಕ್ ಡೌನ್ ಜಾರಿ ಮಾಡಿ ಸುಮ್ಮನೆ ಕೂರದೇ ರಾಜ್ಯದಲ್ಲಿರುವ ಕಾರ್ಮಿಕರ ಹಿತದೃಷ್ಟಿ ಕಾಪಾಡಲು ಮುಂದಾಗಿದ್ದು, ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿದೆ.
ಕೂಲಿ ಕಾರ್ಮಿಕರ ಖಾತೆಗಳಿಗೆ ಮಹಾರಾಷ್ಟ್ರ ಸರ್ಕಾರವು 1,500 ರೂಪಾಯಿಗಳನ್ನು ಜಮಾ ಮಾಡಲಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ, ಸರ್ಕಾರ ನೋಂದಾಯಿತ 13 ಲಕ್ಷ ಕಾರ್ಮಿಕರಲ್ಲಿ 9.17 ಲಕ್ಷ ನಿರ್ಮಾಣ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಮೇ 1 ರವರೆಗೆ ಲಾಕ್ ಡೌನ್ ಮಾದರಿ ನಿರ್ಬಂಧ ವಿಧಿಸಿದ್ದು ಇನ್ನು 15 ದಿನ ನಿರ್ಬಂಧ ವಿಸ್ತರಿಸಲು ಚಿಂತನೆ ನಡೆಸಿದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಲಾಕ್ ಡೌನ್ ಮಾದರಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆದರೆ, ಕಾರ್ಮಿಕರನ್ನು ಸರ್ಕಾರ ತಿರುಗಿ ಕೂಡ ನೋಡಿಲ್ಲ.
ವಲಸೆ ಕಾರ್ಮಿಕರು ಹಸಿವಿನಿಂದ ರಾಜ್ಯದಲ್ಲಿ ಒದ್ದಾಡುತ್ತಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿರುವ ಕಾರ್ಮಿಕರು ನಗರಕ್ಕೆ ಕೆಲಸಕ್ಕೆ ಬರಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಇದ್ಯಾವುದು ಕೂಡ ಕರ್ನಾಟಕ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯ ಸಂಕಷ್ಟದಲ್ಲಿರುವ ಆಹಾರ ಸಚಿವರೊಬ್ಬರು ಜನರನ್ನು ಸತ್ತು ಹೋಗಿ ಎಂದು ಹೇಳಿದ್ದಾರೆ. ಇಂತಹ ಸರ್ಕಾರ ಎಂದಿಗೂ ನೋಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.