ಬಿಗ್ ಬಾಸ್ ಮನೆಯಲ್ಲಿ ಕಾರ್ಮೋಡ: ಡೈಲಾಗ್ ಗಳ ಧಾರಾಕಾರ ಸುರಿಯುವ ಸಾಧ್ಯತೆ - Mahanayaka

ಬಿಗ್ ಬಾಸ್ ಮನೆಯಲ್ಲಿ ಕಾರ್ಮೋಡ: ಡೈಲಾಗ್ ಗಳ ಧಾರಾಕಾರ ಸುರಿಯುವ ಸಾಧ್ಯತೆ

pradeep ishwar
09/10/2023

ಬಿಗ್ ಬಾಸ್ ಮನೆಯಲ್ಲಿ ಕಾರ್ಮೋಡ ಕವಿದಿದೆ, ಯಾವುದೇ ಕ್ಷಣಗಳಲ್ಲಾದ್ರೂ ಡೈಲಾಗ್ ಗಳ ಧಾರಾಕಾರ ಸುರಿಯಬಹುದು. ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಕ್ಷಣ, ಬಿಗ್ ಬಾಸ್ ಮನೆ ರಂಗೇರಿದೆ.


Provided by

ಮನೋರಂಜನಾ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 10 ಆರಂಭವಾಗಿದೆ. ವಿವಿಧ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದರೆ, ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಅವರು ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೋ ಅಥವಾ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದಾರೋ ಗೊತ್ತಿಲ್ಲ, ಆದ್ರೆ ಒಬ್ಬ ಶಾಸಕರಾಗಿ ಬಿಗ್ ಬಾಸ್ ಮನೆಗೆ ಹೋಗೋದು ಎಷ್ಟು ಸರಿ ಅನ್ನೋ ಹಲವು ಪ್ರಶ್ನೆಗಳು ಕೂಡ ಪ್ರದೀಪ್ ಈಶ್ವರ್ ಗೆ ಜನ ಕೇಳುತ್ತಿದ್ದಾರೆ.

ಕಳೆದ ಕೆಲವು ಸೀಸನ್ ಗಳು ಬಿಗ್ ಬಾಸ್ ಮನೆಯನ್ನು ಕಳೆಗುಂದಿಸಿತ್ತು. ಆರಂಭದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ ಕನ್ನಡದ ಬಿಗ್ ಬಾಸ್ ಕಾಲ ಕ್ರಮೇಣ ಅವನತಿಯತ್ತ ಸಾಗಿತ್ತು ಎಂದೇ ಹೇಳಲಾಗುತ್ತಿತ್ತು. ಆದ್ರೆ ಈ ಬಾರಿ ಕೆಲವೊಂದು ಹೊಸ ಪ್ರಯೋಗಗಳ ಮೂಲಕ ಜನರನ್ನು ಆಕರ್ಷಿಸಲು ಕಾರ್ಯಕ್ರಮ ಆಯೋಜಕರು ಮುಂದಾಗಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮವನ್ನು ವಿರೋಧಿಸುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇನ್ನೊಂದೆಡೆ ಈ ಕಾರ್ಯಕ್ರಮವನ್ನು ಮೆಚ್ಚಿ ನೋಡುವವರ ಸಂಖ್ಯೆಯೂ ಅಷ್ಟೇ ಇದೆ.


Provided by

ಇತ್ತೀಚಿನ ಸುದ್ದಿ