ಬಿಜೆಪಿ ಶಾಸಕ, ಉಪ ಸ್ಪೀಕರ್ ಆನಂದ ಮಾಮನಿ ಇನ್ನಿಲ್ಲ - Mahanayaka
7:24 AM Thursday 12 - December 2024

ಬಿಜೆಪಿ ಶಾಸಕ, ಉಪ ಸ್ಪೀಕರ್ ಆನಂದ ಮಾಮನಿ ಇನ್ನಿಲ್ಲ

anand mamani
23/10/2022

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸವದತ್ತಿ ಕ್ಷೇತ್ರದ ಶಾಸಕ, ಕರ್ನಾಟಕ ವಿಧಾನ ಸಭೆಯ ಉಪ ಸ್ಪೀಕರ್ ಆನಂದ ಮಾಮನಿ ಅವರು ಬೆಂಗಳೂರಿನ ಹಳೆಯ  ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ರಾತ್ರಿ 12 ಗಂಟೆ 2 ನಿಮಿಷಕ್ಕೆ ಕೊನೆಯುಸಿರೆಳೆದಿದ್ದಾರೆ.

56 ವರ್ಷದ ಆನಂದ್ ಮಾಮನಿ ಅವರು , ಲಿವರ್ ಕ್ಯಾನ್ಸರ್ ನಿಂದ ಕಳೆದ ಹಲವು ದಿನಗಳಿಂದ ಬಳಲುತ್ತಿದ್ದರು. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ಅವರು, ಸವದತ್ತಿ ಕ್ಷೇತ್ರದಲ್ಲಿ  ಮೂರನೇ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶಿಸಿದ್ದರು.

ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಸಚಿವ ಉಮೇಶ್ ಕತ್ತಿ ನಿಧನರಾಗಿದ್ದರು. ಇದೀಗ ಮತ್ತೋರ್ವ ಪ್ರಬಲ ನಾಯಕ ಆನಂದ ಮಾಮನಿ ಅವರೂ ಅಗಲಿದ್ದಾರೆ. ಬೆಳಗಾವಿ ಜಿಲ್ಲೆ ಬಿಜೆಪಿ ಇಬ್ಬರು ಪ್ರಬಲ ನಾಯಕರನ್ನು ಕಳೆದುಕೊಂಡಿದೆ.

ಆನಂದ್ ಮಾಮನಿ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ನಮ್ಮ ಪಕ್ಷದ ಶಾಸಕರು, ರಾಜ್ಯ ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಆತ್ಮೀಯ ಆನಂದ್ ಮಾಮನಿ ಅವರ ನಿಧನದ ವಿಷಯ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ