ಇಂದು ಉಪ ಚುನಾವಣೆ:  ಜಿದ್ದಾಜಿದ್ದಿನ ಪ್ರಚಾರದ ಬಳಿಕ ಮತದಾರನ ತೀರ್ಪು ಏನಿರಬಹುದು? - Mahanayaka
11:11 PM Wednesday 11 - December 2024

ಇಂದು ಉಪ ಚುನಾವಣೆ:  ಜಿದ್ದಾಜಿದ್ದಿನ ಪ್ರಚಾರದ ಬಳಿಕ ಮತದಾರನ ತೀರ್ಪು ಏನಿರಬಹುದು?

03/11/2020

ಬೆಂಗಳೂರು: ರಾಜ್ಯದ ಎರಡುಕ್ಷೇತ್ರಗಳಿಗೆ ಇಂದು ಉಪ ಚುನಾವಣೆ ನಡೆಯುತ್ತಿದೆ. ಮತದಾನ ಈಗಾಲೇ ಆರಂಭವಾಗಿದ್ದು, ಕಳೆದ ಎರಡು ವಾರಗಳಿಂದ ಜಿದ್ದಾಜಿದ್ದಿನ ಪ್ರಚಾರಗಳು ನಡೆದು ಅಂತಿಮವಾಗಿ ಮತದಾರ ಯಾರ ಪರವಾಗಿ ತೀರ್ಪು ನೀಡಲಿದ್ದಾನೆ ಎಂಬ ಬಗ್ಗೆ ಕುತೂಯಹಲ ಮೂಡಿದೆ.


ಆರ್ ಆರ್ ನಗರ ಮತ್ತು ಶಿರಾ ಉಪ ಚುನಾವಣೆ ಫಲಿತಾಂಶದಿಂದ ಸರ್ಕಾರದಲ್ಲಿ ಯಾವುದೇ ಬದಲಾವಣೆಯಾಗಲು ಸಾಧ್ಯವಿಲ್ಲ. ಆದರೆ, ಆರ್ ಆರ್ ನಗರದಿಂದ ಮುನಿರತ್ನ ಅವರು ಸ್ಪರ್ಧಿಸಿರುವುದರಿಂದಾಗಿ ಕಾಂಗ್ರೆಸ್ ಗೆ ಇದೊಂದು ಪ್ರತಿಷ್ಠೆಯ ಕಣವಾಗಿದೆ. ಆರ್ ಆರ್ ನಗರವೇ ಈ ಉಪ ಚುನಾವಣೆಯ ಕೇಂದ್ರ ಬಿಂದುವಾಗಿ ಬಂಬಿತವಾಗುತ್ತಲೇ ಬಂದಿದೆ.


ಇಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದೆ, ಎರಡು ಕ್ಷೇತ್ರಗಳಿಂದ, ಒಟ್ಟು 1,008 ಬೂತ್ ಗಳನ್ನು ಸ್ಥಾಪಿಸಲಾಗಿದ್ದು, ಥರ್ಮಲ್ ಸ್ಕ್ಯಾನರ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇನ್ನೊಂದು ವಿಶೇಷ ಏನೆಂದರೆ, ಕೊರೊನಾ ಪಾಸಿಟಿವ್ ಇದ್ದವರು ಕೂಡ ಮತ ಚಲಾಯಿಸಬಹುದಂತೆ.


ಇತ್ತೀಚಿನ ಸುದ್ದಿ