ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮಾ.ಹರೀಶ್ ಆಯ್ಕೆ
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯು ಮೇ 28ರಂದು ನಡೆದಿದ್ದು, ಫಲಿತಾಂಶ ಇದೀಗ ಹೊರಬಿದ್ದಿದೆ. ಈ ಚುನಾವಣೆಯಲ್ಲಿ ನಿರ್ಮಾಪಕ ಭಾ.ಮಾ ಹರೀಶ್ ಗೆಲುವು ಸಾಧಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಫಿಲ್ಮ್ ಚೇಂಬರ್‌ನ ಅಧ್ಯಕ್ಷ ಸ್ಥಾನಕ್ಕೆ ಭಾ.ಮಾ ಹರೀಶ್ ಹಾಗೂ ಸಾ. ರಾ ಗೋವಿಂದು ಸ್ಪರ್ಧಿಸಿದ್ದರು. ಇನ್ನು ಈ ಚುನಾವಣೆಯಲ್ಲಿ 400 ಮತಗಳ ಅಂತರದಿಂದ ಭಾ.ಮಾ ಹರೀಶ್ ಗೆಲುವಿನ ಪತಾಕೆ ಹಾರಿಸಿದ್ದಾರೆ. 796 ನಿರ್ಮಾಪಕರು, 301 ವಿತರಕರು, 679 ಪ್ರದರ್ಶಕರು ಮತದಾನದಲ್ಲಿ ಪಾಲ್ಗೊಂಡಿದ್ದರು.
ಒಟ್ಟು 1,176 ಮತದಾನವಾಗಿದ್ದು, ಅದರಲ್ಲಿ 781 ಮತಗಳು ಭಾಮಾ ಹರೀಶ್ ಕಡೆಗೆ ಮುಖ ಮಾಡಿದೆ. ಇನ್ನು ಸಾ.ರಾ.ಗೋವಿಂದು ಅವರಿಗೆ ಕೇವಲ 378 ಮತಗಳು ಬಿದ್ದಿವೆ. ಈ ಮೂಲಕ ಭಾಮಾ ಹರೀಶ್, ಇನ್ನು ಮುಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಇನ್ನು ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲ ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ನಟ ನಿರ್ಮಾಪಕ ಸುಂದರ್ ರಾಜ್ ಆಯ್ಕೆಯಾಗಿದ್ದಾರೆ.
ಫಿಲ್ಡ್ ಚೇಂಬರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭಾ.ಮಾ ಹರೀಶ್ ಈ ವೇಳೆ ಮಾತನಾಡಿ, ಈ ಗೆಲುವನ್ನು ಪ್ರತಿಯೊಬ್ಬ ಚಿತ್ರರಂಗದವರಿಗೆ ಅರ್ಪಿಸುತ್ತೇನೆ. ಗೆಲುವು ಖುಷಿ ಕೊಟ್ಟಿದೆ. ರಾಜ್ ಕುಮಾರ್ ಕುಟುಂಬ, ಮುನಿರತ್ನ, ರಾಕ್ ಲೈನ್ ವೆಂಕಟೇಶ್, ಜಯಮಾಲ ಸೇರಿ ಅನೇಕರು ಬೆಂಬಲ ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವೆಸ್ಟ್ ನೈಲ್ ಜ್ವರ ವ್ಯಕ್ತಿ ಸಾವು: ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ
ನಾಲ್ವರು ಭಾರತೀಯರ ಸಹಿತ 22 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನ ನಾಪತ್ತೆ!
19 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ
ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ 7 ಮಂದಿ ಅಪಘಾತಕ್ಕೆ ಬಲಿ