ಕರ್ನಾಟಕದಲ್ಲಿ ಹೊಸ 10 ಒಮಿಕ್ರಾನ್ ಪ್ರಕರಣಗಳು ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 10 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಜನವರಿ 2 ರಂದು ಕರ್ನಾಟಕದಲ್ಲಿ ಹತ್ತು ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 76ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಒಮಿಕ್ರಾನ್ ಕೇಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. 10 ಪ್ರಕರಣಗಳ ಪೈಕಿ 8 ಕೇಸ್ ಗಳು ಬೆಂಗಳೂರಿನದ್ದಾಗಿದೆ. ಉಳಿದಂತೆ ಧಾರವಾಡದಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಪತ್ತೆಯಾಗಿರುವ 8 ಪ್ರಕರಣಗಳಲ್ಲಿ ಐದು ಜನರು ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ 10 ಜನ ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಏಕಾಏಕಿ ಆ್ಯಕ್ಟಿವ್ ಆದ ಸುಶಾಂತ್ ಸಿಂಗ್ ಫೇಸ್ ಬುಕ್ ಖಾತೆ | ಅಭಿಮಾನಿಗಳಿಗೆ ಶಾಕ್
ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!
ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು
ಟಫ್ ರೂಲ್ಸ್ ಜಾರಿ ಸಾಧ್ಯತೆ: ಸುಳಿವು ನೀಡಿದ ಆರ್.ಅಶೋಕ್
ದೇವರ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ: 12 ಮಕ್ಕಳು ಸಹಿತ 50 ಮಂದಿ ಅಸ್ವಸ್ಥ