10:27 PM Wednesday 12 - March 2025

ನಿರಾಶ್ರಿತ 72 ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಲ್ಲ: ಸುಪ್ರೀಂ ಕೋರ್ಟ್ ಗೆ ಉತ್ತರಿಸಿದ ಬೊಮ್ಮಾಯಿ ಸರ್ಕಾರ

rohingya muslims
26/10/2021

ಬೆಂಗಳೂರು: ರಾಜ್ಯದಲ್ಲಿರುವ ನಿರಾಶ್ರಿತ 72 ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯ ಎಂಬವರು ರೊಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿ ಅಭಿಪ್ರಾಯ ಕೇಳಿತ್ತು.

ಈ ಅರ್ಜಿಗೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ, ಬೆಂಗಳೂರಿನಲ್ಲಿ 72 ರೊಹಿಂಗ್ಯಾ ಮುಸ್ಲಿಮರು ವಾಸ ಮಾಡುತ್ತಿದ್ದು, ನಗರದ ವಿವಿಧೆಡೆಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳುವ ಯಾವುದೇ ಯೋಚನೆ ಇಲ್ಲ. ಅವರನ್ನು ಗಡಿಪಾರು ಮಾಡಲು  ಕಾನೂನಿನಲ್ಲಿ ಕೂಡ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಜೊತೆಗೆ ರೊಹಿಂಗ್ಯಾ ಮುಸ್ಲಿಮರ ಗಡಿಪಾರಿಗೆ ಒತ್ತಾಯಿಸಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ಗೆ ರಾಜ್ಯ ಬಿಜೆಪಿ ಸರ್ಕಾರ ಸಲಹೆ ನೀಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಬಿಜೆಪಿಯ ಗೆಲುವಿನಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದು | ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಕುಮಾರಸ್ವಾಮಿಯ ದಾಖಲೆ ನನ್ನ ಬಳಿ ಇದೆ, ಗೌರವ ಇಲ್ಲದೇ ಮಾತನಾಡಿದ್ರೆ ಸುಮ್ನಿರಲ್ಲ | ಜಮೀರ್ ಎಚ್ಚರಿಕೆ

ಶಿಕ್ಷಣ ವ್ಯವಸ್ಥೆಗೆ ನನ್ನ ಬಲಿದಾನ ಎಂದು ವಿಡಿಯೋ ಮಾಡಿ ಯುವಕ ಆತ್ಮಹತ್ಯೆ!

74 ವರ್ಷದ ವೃದ್ಧನಿಂದ ಬಾಲಕಿಯ ಅತ್ಯಾಚಾರ: ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣು

ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ

ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ

ಇತ್ತೀಚಿನ ಸುದ್ದಿ

Exit mobile version