Junior Assistant Recruitment 2024 : PUC ಪಾಸಾದವರಿಗೆ  ಇಲ್ಲಿದೆ ಉದ್ಯೋಗ:  ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ - Mahanayaka
8:44 PM Wednesday 11 - December 2024

Junior Assistant Recruitment 2024 : PUC ಪಾಸಾದವರಿಗೆ  ಇಲ್ಲಿದೆ ಉದ್ಯೋಗ:  ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ

job news
01/07/2024

” ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸರ್ಕಾರಿ ನಿಯಮಿತ, ಬೆಂಗಳೂರಿನಲ್ಲಿ ಕಿರಿಯ ಸಹಾಯಕ ಹುದ್ದೆಗಳು ಸೇರಿದಂತೆ ವಿವಿಧ ವೃಂದಗಳಲ್ಲಿನ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ..

Junior Assistant Recruitment 2024 – ಕಿರಿಯ ಸಹಾಯಕ, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೇರಿದಂತೆ ಒಟ್ಟು 39 ಹುದ್ದೆಗಳಿಗೆ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ ಉತ್ತಮವಾದ ಸಂಬಳ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಂಪೂರ್ಣ ಅರ್ಹತೆಯನ್ನು ತಿಳಿದುಕೊಂಡು ಬೇಗ ಅರ್ಜಿ ಸಲ್ಲಿಸಿ.

ಅರ್ಹತೆಗಳೇನಿರಬೇಕು?

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಹುದ್ದೆಗಳಿಗೆ ಅನುಗುಣವಾಗುವಂತೆ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ, ಸಂಬಂಧಪಟ್ಟ ವಿಷಯದಲ್ಲಿ ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯೋಮಿತಿ 18 ವರ್ಷದಿಂದ 35 ವರ್ಷದ ವಯೋಮಿತಿ ಇರಬೇಕು.

ಸಂಬಳ ಎಷ್ಟು ಸಿಗುತ್ತದೆ?:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 13,000 ರೂ. ಯಿಂದ 70,000 ರೂಪಾಯಿಯವರೆಗೆ ಮಾಸಿಕ ವೇತನ ಸಿಗಲಿದೆ.

ಅರ್ಜಿ ಸಲ್ಲಿಸುವ ವಿಧಾನ:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಈ ನಿಗಮದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ನಂತರ ಅಲ್ಲಿ ಸಿಗುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಹಾಗೂ ನಿಮ್ಮ ಅರ್ಹತೆಗಳನ್ನು ತಿಳಿದುಕೊಂಡು, ನೀವು ಅರ್ಹರಿದ್ದರೆ ಅಲ್ಲಿ ಸಿಗುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

 ಅರ್ಜಿ ಸಲ್ಲಿಸುವ ವಿಳಾಸ :

“ಸೌಹಾರ್ದ ಸಹಕಾರಿ ಸೌಧ”

#68, ಒಂದನೇ ಮಹಡಿ, 18ನೇ ಅಡ್ಡ ರಸ್ತೆ, ಮಾರ್ಗೋಸ್ ರಸ್ತೆ ಮಲ್ಲೇಶ್ವರಂ, ಬೆಂಗಳೂರು – 560055

ಅರ್ಜಿ ಸಲ್ಲಿಸಲು ಜುಲೈ 26, 2024 ಕೊನೆಯ ದಿನಾಂಕವಾಗಿದೆ.

ನಿಗಮದ ಜಾಲತಾಣದ ಲಿಂಕ್ : www.souharda.coop


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ