ಬಡ ಕುಟುಂಬದ ಮನೆಯ ಮೇಲ್ಛಾವಣಿ ದುರಸ್ತಿ ನಡೆಸಿದ ಕರವೇ ಸ್ವಾಭಿಮಾನಿ ಬಣ
ಪುತ್ತೂರು: ನೆಟ್ಟನಿಗೆ ಮೂಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಶ್ವರಮಂಗಲ ಸುನ್ನಿ ಸೆಂಟರ್ ಸಮೀಪದ ಹನೀಫ್ ಎಂಬವರ ಬಡ ಕುಟುಂಬದ ಮನೆಯ ಮೇಲ್ಚಾವಣಿಯ ನಿರ್ಮಾಣದ ಕೆಲಸವನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಸಮಿತಿ ಅಧ್ಯಕ್ಷ ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಬಡ ಕುಟುಂಬದ ಮನೆಯ ಮೇಲ್ಚಾವಣಿ ದುರಸ್ತಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ 40 ಮನೆಗಳ ದುರಸ್ತಿ ಕಾರ್ಯವನ್ನು ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣ ನಡೆಸಿದ್ದು, ಈ ಮೂಲಕ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ವೇದಿಕೆಯ ಕೆಲಸ ಸಹಕಾರಿಯಾಗಿದೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಹಾಗೂ ತಾಲ್ಲೂಕಿನ ನಾಯಕರದ ಆಸೀಫ್ ಹಾಜಿ ತಂಬುತ್ತಡ್ಕ, ಜಲೀಲ್ ಬೈತಡ್ಕ,ಗಿರೀಶ್ ಸೇಠ್ ಮಂಗಳೂರು, ಸಿದ್ದೀಕ್ ತಂಬುತ್ತಡ್ಕ, ಸೈಯದ್ YMK, ರೀಶಾದ್ YMK, ನಾಸೀರ್ ನಿಡ್ಪಳ್ಳಿ, ರಝಕ್ ತಂಬುತ್ತಡ್ಕ, ಮೇಸ್ತ್ರಿ ಶ್ರೀಧರ ಮಣಿಯಾಣಿ ತಲಪಾಡಿ, ಫೈರೋಝ್ ಕುಕ್ಕುವಳ್ಳಿ, ಗಫೂರು ತಂಬುತ್ತಡ್ಕ, ವಸಂತ ಪಟ್ಟೆ, ಅಮ್ಮಿ ನಿಡ್ಪಳ್ಳಿ, ಪಯಾಝ್ ಚೆಲ್ಯಡ್ಕ, ಅಸ್ಕರ್ ನಾಕಪ್ಪಾಡಿ, ಐತಪ್ಪ ಬಾಳುಮೂಲೆ, ಇಸಾಕ್ ಕರ್ನಾಪಾಡಿ, ಮಂಚು ತಂಬುತ್ತಡ್ಕ, ಜಾಬೀರ್ ರೆಂಜ, MISA ಕೊರಿಂಗಿಲ ಸಂಘಟನೆಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.