ದೇಶದಲ್ಲಿ ಅತಿ ಹೆಚ್ಚು ಅಸೆಂಬ್ಲಿ ಕಲಾಪ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕವೇ ಫಸ್ಟ್ - Mahanayaka
6:10 PM Wednesday 11 - December 2024

ದೇಶದಲ್ಲಿ ಅತಿ ಹೆಚ್ಚು ಅಸೆಂಬ್ಲಿ ಕಲಾಪ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕವೇ ಫಸ್ಟ್

02/06/2023

ಮತ್ತೊಂದು ಗುಡ್ ನ್ಯೂಸ್..!

2022ರಲ್ಲಿ ಅತಿ ಹೆಚ್ಚು ದಿನ ವಿಧಾನಸಭೆಯ ಕಲಾಪ ನಡೆಸಿದ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ಮತ್ತೊಂದೆಡೆ, ಬಜೆಟ್ ಮೇಲಿನ ಚರ್ಚೆಗೆ ಹೆಚ್ಚು ಅವಕಾಶ ಮಾಡಿ ಕೊಟ್ಟ ದೇಶದ ಎರಡನೇ ರಾಜ್ಯವಾಗಿಯೂ ಕರ್ನಾಟಕ ಹೊರಹೊಮ್ಮಿದೆ.

ದೇಶದ ವಿವಿಧ ವಿಧಾನಸಭೆಗಳ ಕಲಾಪ ಕುರಿತಂತೆ ಚಿಂತನಾ ಸಂಸ್ಥೆಯಾಗಿರುವ ಪಿಆರ್ ಎಸ್‌ ಲೆಜಿಸ್ಟ್ರೇಟಿವ್ ರೀಸರ್ಚ್ ಸಂಸ್ಥೆ ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ಈ ಮಾಹಿತಿ ನೀಡಲಾಗಿದೆ. 2022ನೇ ವರ್ಷದಲ್ಲಿ ದೇಶಾದ್ಯಂತ ಸರಾಸರಿ ಕೇವಲ 21 ದಿನಗಳು ಮಾತ್ರ ವಿಧಾನಸಭೆ ಕಲಾಪ ನಡೆದಿದೆ.

ಆದರೆ ಕರ್ನಾಟಕದಲ್ಲಿ 45 ದಿನಗಳ ಕಾಲ ಕಲಾಪ ನಡೆದಿದೆ. ಪಶ್ಚಿಮ ಬಂಗಾಳ (42 ದಿನ) ಹಾಗೂ ಕೇರಳ (41 ದಿನ) ನಂತರದ ಸ್ಥಾನದಲ್ಲಿ ಇವೆ.

2022ರಲ್ಲಿ ಬಜೆಟ್ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ 26 ದಿನಗಳ ಕಾಲ ಚರ್ಚೆ ನಡೆದಿದೆ. ನಂತರದ ಸ್ಥಾನದಲ್ಲಿ ಇದೆ. ಕರ್ನಾಟಕ ಇದ್ದು, 15 ದಿನ ಚರ್ಚೆಯಾಗಿದೆ. ಬಳಿಕದ ಸ್ಥಾನದಲ್ಲಿ ಕೇರಳ (14 ದಿನ) ಹಾಗೂ ಒಡಿಶಾ (14 ದಿನ) ಗಳು ಇವೆ ಎಂದು ವರದಿ ವಿವರಿಸಿದೆ.

ಇನ್ನು ಪ್ರತಿ ವಿಧಾನಸಭೆಯಲ್ಲೂ ವರ್ಷಕ್ಕೆ 2 ಅಥವಾ 3 ಬಾರಿ ಅಧಿವೇಶನಗಳು ನಡೆಯುತ್ತವೆ. ಈ ಪೈಕಿ ಬಜೆಟ್ ಅಧಿವೇಶನ  ಸುದೀರ್ಘವಾಗಿರುತ್ತದೆ. ನಂತರ ಮುಂಗಾರು ಹಾಗೂ ಚಳಿಗಾಲದ ಅಧಿವೇಶನಗಳು ನಡೆಯುತ್ತವೆ.

ಈಶಾನ್ಯದ 5 ರಾಜ್ಯಗಳು ಸೇರಿ 12 ರಾಜ್ಯಗಳಲ್ಲಿ 2022ರಲ್ಲಿ ಎರಡೇ ಅಧಿವೇಶನ ನಡೆದಿವೆ. ವಿಧಾನಸಭೆಯ ಒಟ್ಟಾರೆ ಕಲಾಪದಲ್ಲಿ ದೇಶದಲ್ಲಿ ಸರಾಸರಿ ಶೇಕಡಾ 61ರಷ್ಟು ಬಜೆಟ್ ಅಧಿವೇಶನದ್ದೇ ಆದರೆ ತಮಿಳುನಾಡಿನಲ್ಲಿ ಶೇಕಡಾ 90 ರಷ್ಟು ಕಲಾಪವನ್ನು ಬಜೆಟ್‌ ಅಧಿವೇಶನದಲ್ಲಿಯೇ ನಡೆಸಲಾಗಿದೆ. ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಈ ಪ್ರಮಾಣ ಶೇಕಡಾ 80 ರಷ್ಟಿದೆ ಎಂದು ಹೇಳಿದೆ. ಬಜೆಟ್ ಮೇಲಿನ ಚರ್ಚೆ ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ದಿನ ನಡೆದಿದೆ ಎಂಬ ಮಾಹಿತಿ ಈ ವರದಿಯಲ್ಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ