ಕರ್ನಾಟಕದ 11 ವಿದ್ಯಾರ್ಥಿಗಳು ಉಕ್ರೇನ್ ನಿಂದ ವಾಪಸ್: ನಿಟ್ಟುಸಿರು ಬಿಟ್ಟ ಪೋಷಕರು
ಬೆಂಗಳೂರು: ಉಕ್ರೇನ್ ನಿಂದ ಇಂದು 11 ಮಂದಿ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಆಗಮಿಸಿದ್ದು, ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮುಂಬೈನಿಂದ ಕೆಂಪೆಗೌಡ ಇಂಟರ್ ನ್ಯಾಷನಲ್ ಏರ್ಪೋರ್ಟ್ಗೆ ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್.ಅಶೋಕ್ ಬರ ಮಾಡಿಕೊಂಡರು. ಬೆಂಗಳೂರಿನ 9 ಮಂದಿ ವಿದ್ಯಾರ್ಥಿಗಳು, ದಾವಣಗೆರೆಯ ಇಬ್ಬರು ವಿದ್ಯಾರ್ಥಿಗಳು ಮತ್ತು ಬೆಳಗಾವಿಯ ಓರ್ವ ವಿದ್ಯಾರ್ಥಿ ಇಂದು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಸಯೀದಾ ಸುಬೇದಾರ್., ದಾವಣಗೆರೆಯ ಸಯೀದಾ ಹಬೀಬಾ, ಮಹಮ್ಮದ್ ಅಬೀದ್ ಅಲಿ ಶೌಕತ್, ಬೆಂಗಳೂರಿನ ಸಂಪಂಗಿರಾಮರೆಡ್ಡಿ ಮೋನಿಕಾ, ಉದಯ್ ಕೆ.ವಿ., ಇಂಚರರಾಜ್ ಶಿವರಾಜ್, ವಿಜಯಲಕ್ಷ್ಮಿ ಚಕ್ರವರ್ತಿ, ರಿಯಾ ಕುಮಾರಿ, ತುಷಾರ್ ಮಧು, ಶ್ರೇಯಾ ಚಂದ್ರಶೇಖರ್, ನಬೀಹಸ್ ಹುಡ, ಪೂಜಾ ಕುಮಾರಿ ಯಾದವ್ ಇಂದು ಉಕ್ರೇನ್ ನಿಂದ ಭಾರತಕ್ಕೆ ಮರಳಿದವರು ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾವೇರಿ ನದಿ ದಾಟುವ ವೇಳೆ ದುರಂತ: ಹಲವು ಭಕ್ತರು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ
ಸೀಮಂತ ಕಾರ್ಯಕ್ರಮ ವೇಳೆ ಅಡುಗೆ ಸಿಲಿಂಡರ್ ಸ್ಫೋಟ: ನಾಲ್ವರ ಸಾವು, 19 ಮಂದಿ ಗಂಭೀರ
ಉಕ್ರೇನ್ ನಲ್ಲಿ ಅನ್ನ ನೀರಿಗಾಗಿ ಪರದಾಡುತ್ತಿರುವ ಭಾರತೀಯರು!