ಕರ್ನಾಟಕದಲ್ಲೂ ಪೊರಕೆ ಬೀಸುತ್ತಾರಾ ಕೇಜ್ರಿವಾಲ್: 0% ಸರ್ಕಾರದ ಭರವಸೆ! - Mahanayaka
10:13 PM Thursday 14 - November 2024

ಕರ್ನಾಟಕದಲ್ಲೂ ಪೊರಕೆ ಬೀಸುತ್ತಾರಾ ಕೇಜ್ರಿವಾಲ್: 0% ಸರ್ಕಾರದ ಭರವಸೆ!

karnataka aap
22/04/2022

ಬೆಂಗಳೂರು: ದಿಲ್ಲಿ, ಪಂಜಾಬ್‌ ಯಶಸ್ಸಿನ ನಂತರ ಕರ್ನಾಟಕದ ಮೇಲೆ ಕಣ್ಣಿಟ್ಟಿರೋ ಅರವಿಂದ್‌ ಕೇಜ್ರಿವಾಲ್‌ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದಾರೆ. ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ಆಯೋಜಿಸಿದ ರೈತ ಸಮಾವೇಶದಲ್ಲಿ ಮಾತಾಡಿದ ಅವ್ರು ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ. ಈಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ಬರಬೇಕು. ಇಲ್ಲಿ 40% ಸರ್ಕಾರ ಇದೆ. ದೆಹಲಿಯಲ್ಲಿ ೦% ಸರ್ಕಾರ ಇದೆ. ಈ ಸರ್ಕಾರ ಹೋಗಿ, ನಮ್ಮ ಎಎಪಿ ಸರ್ಕಾರ ಬರಬೇಕು ಎಂಬುದಾಗಿ ಕರೆ ನೀಡಿದ್ದಾರೆ.

ಇಂದು ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಕೇಂದ್ರ ಸರ್ಕಾರ ಮೂರು‌ ಕೃಷಿ ಕಾಯ್ದೆ ತಂದಿತ್ತು. ಅಹಂಕಾರದಿಂದ ಕಾಯ್ದೆ ಜಾರಿ‌ ಮಾಡಿತ್ತು. ಲಂಕಾಧಿಪತಿ ಅಹಂಕಾರ ಇಳಿದಂತೆ ರೈತರ ಮೂಲಕ ‌ಮೋದಿ ಅಹಂಕಾರವೂ ಇಳಿದೋಯ್ತು. ರೈತರ ಹೋರಾಟದಿಂದ ಕಾಯ್ದೆ ವಾಪಸ್ಸು ಆಯ್ತು. ನಾನು ಕೂಡ ಹೋರಾಟ ಮೂಲಕ ಬಂದಿದ್ದೇನೆ .ಸಾಮಾನ್ಯ ಜನರಾಗಿ ನಾವು ಚುನಾವಣೆ ಎದುರಿಸಿದ್ದೇವೆ. ದೆಹಲಿ, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇದೆ.

ಸಾಮಾನ್ಯ ಜನರಿಗೆ ಶಾಲೆ, ಆರೋಗ್ಯ ‌ಮುಖ್ಯ. ಅದನ್ನು ದೆಹಲಿಯಲ್ಲಿ ‌ಮಾಡಿದ್ದೇವೆ. ಸಿಬಿಐ ದಾಳಿ ಆಯ್ತು, ನನ್ನ ಮನೆಯಲ್ಲಿ ಏನು ಸಿಗಲಿಲ್ಲ. ಆಗ ಮೋದಿನೆ ಹೇಳಿದ್ರು, ನಾನು ಸಾಮಾನ್ಯ ಮನುಷ್ಯ ಅಂತ ಗೊತ್ತಾಯ್ತು. ಆಮೇಲೆ ಸರ್ಕಾರದ ಮಂತ್ರಿ ಮೇಲೆ ದಾಳಿ ಆಯ್ತು. ಆದ್ರೆ ಸಿಬಿಐಗೆ ಏನು ಸಿಗಲಿಲ್ಲ. ನಾನು ಸಾಮಾನ್ಯ ‌ಮನುಷ್ಯ, ಹೆಂಡತಿ ಮಕ್ಕಳು ಇದ್ದಾರೆ. ನನಗೆ ಸಾಮಾನ್ಯ ಜನರ ಸಮಸ್ಯೆ ಚನ್ನಾಗಿ ಗೊತ್ತಿದೆ ಎಂದರು.

ಎರಡು ದಿನಗಳ ಹಿಂದೆ ಹಲ್ಲು‌ ನೋವು ಇತ್ತು. ಅದಕ್ಕೆ ಆಪರೇಷನ್ ಆಗಿದೆ.  ಪೇನ್ ಕಿಲ್ಲರ್ ಮಾತ್ರೆ ತೆಗೆದುಕೊಂಡು ಬಂದಿದ್ದೇನೆ. ಹಾಗಾಗಿ ಮಾತನಾಡಲು ಆಗಲ್ಲ ಅಂತ ಹೇಳಿದ್ದೆ. ಆದ್ರೆ ಸಾವಿರಾರು ಸಂಖ್ಯೆಯಲ್ಲಿ ರೈತರು ಬರುತ್ತಿದ್ದಾರೆ. ಹಾಗಾಗಿ ಬರಬೇಕು ಅಂದ್ರು. ರೈತರು ಬಂದ್ರೆ ನಾನು ಬರಲ್ಲ ಅಂತ ಹೇಳಲು ಸಾಧ್ಯವಾಗಲಿಲ್ಲ ಎಂದರು.




ಉತ್ತರ ಪ್ರದೇಶದಲ್ಲಿ ರೈತರ ಮೇಲೆ ವಾಹನ ಹತ್ತಿಸಲಾದರು ಅವನ ಬಂಧನ ಆಗಲಿಲ್ಲ. ಅತ್ಯಾಚಾರ ಮಾಡಿದವರು ಬಿಜೆಪಿ ಸೇರಿದ್ದಾರೆ. ಅವರಿಗೆ ಬಿಜೆಪಿ ಸ್ವಾಗತ ಮಾಡುತ್ತೆ. ಇವತ್ತಿನ ಈ ಜನರನ್ನ ನೋಡಿ ಬಹಳ ಸಂತೋಷವಾಗಿದೆ. ನನಗೆ ರಾಜಕೀಯ ಮಾಡಲು ಬರಲ್ಲ. ಕೆಲಸ ಮಾಡಲು‌ ಮಾತ್ರ ಬರುತ್ತೆ. ರೈತರು ದೇಶಾದ್ಯಂತ ಒಟ್ಟಾಗಬೇಕು. ಭ್ರಷ್ಟ ಬಿಜೆಪಿ ಸರ್ಕಾರ ಕೆಳಗಿಳಿಸಬೇಕು.ಎಲ್ಲರೂ ಒಟ್ಟಾಗಿ ಹೋಗೋಣ ಎಂಬುದಾಗಿ ಕರೆ ನೀಡಿದ್ದಾರೆ.

ಸಮಾವೇಶದಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್, ನಿವೃತ್ತ ಕೆಎಎಸ್ ಅಧಿಕಾರಿ ಕೆ.ಮಥಾಯಿ, ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ, ಬಸವರಾಜಪ್ಪ, ಭಕ್ತರಹಳ್ಳಿ ಬೈರೇಗೌಡ ಅವರು ಆಮ್‍ ಆದ್ಮಿ ಪಾರ್ಟಿಗೆ ಸೇರ್ಪಡೆಯಾದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ  ವಾರೆಂಟ್

ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಬೈಕ್ ನಲ್ಲಿ ಜಾಲಿ ರೈಡ್: ವಿಡಿಯೋ ವೈರಲ್

ದರ ಏರಿಕೆ: ಜಿಯೋ  ಕಳೆದುಕೊಂಡ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತಾ?

ಅಂಬೇಡ್ಕರ್ ಕುರಿತಾದ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಬಿಡುಗಡೆ: ಒಟ್ಟು 6 ಲಕ್ಷ ಬಹುಮಾನ ಘೋಷಣೆ

ನನ್ನನ್ನು ಜೈಲಿಗೆ ಕಳಿಸಬೇಕು ಅನ್ಕೊಂಡಿದ್ರು; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿ

ಇತ್ತೀಚಿನ ಸುದ್ದಿ