ಮುಸ್ಲಿಮ್ ಕಲಾವಿದರಿಂದ ಮೆಹೆಂದಿ ಹಚ್ಚಿಸಿಕೊಳ್ಳಬಾರದು | ಮೆಹೆಂದಿ ಸ್ಟಾಲ್ ಗೆ ಕರ್ಣಿಸೇನೆ ದಾಳಿ
ಮುಜಫರ್ ನಗರ: ಮುಸ್ಲಿಮ್ ಕಲಾವಿದರಿಂದ ಮೆಹೆಂದಿ ಹಚ್ಚಿಸಿಕೊಳ್ಳಬಾರದು ಎಂದು ಬಲಪಂಥೀಯ ಸಂಘಟನೆ ಕರ್ಣಿ ಸೇನೆ ಮುಜಫರ್ ನಗರದ ಮಾರುಕಟ್ಟೆಗಳಲ್ಲಿ ಗೂಂಡಾಗಿರಿ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಕರ್ಣಿ ಸೇನೆಯ 20-25 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎರಡು ದಿನಗಳ ಹಿಂದೆ ಮುಜಫರ್ ನಗರದ ಹರಿಯಾಲಿ ತೀಜ್ ಮಾರುಕಟ್ಟೆಯಲ್ಲಿ ಕರ್ಣಿ ಸೇನೆಯ ಸದಸ್ಯರು ಮುಸ್ಲಿಮ್ ಕಲಾವಿದರಿಂದ ಮೆಹೆಂದಿ ಹಚ್ಚಿಸಿಕೊಳ್ಳಬಾರದು ಎಂದು ಪ್ರಚಾರ ಮಾಡುತ್ತಾ ಅಂಗಡಿಗಳ ಮುಂದೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಅಂಗಡಿಗಳಲ್ಲಿ ಮುಸ್ಲಿಮ್ ಕಲಾವಿದರ ಬಗ್ಗೆ ಮಾತನಾಡಿದ್ದ ಕರ್ಣಿ ಸೇನೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಸೈನಿ, ಮೆಹೆಂದಿ ಹಚ್ಚುವ ನೆಪದಲ್ಲಿ ಮುಸ್ಲಿಮ್ ಯುವಕರು ಹಿಂದೂ ಹುಡುಗಿಯರನ್ನು ಲವ್ ಜಿಹಾದ್ ನಲ್ಲಿ ಸಿಲುಕಿಸುತ್ತಾರೆ. ಹಾಗಾಗಿ ಮುಸ್ಲಿಮ್ ಕಲಾವಿದರಿಂದ ಹಿಂದೂ ಹುಡುಗಿಯರು ಮೆಹೆಂದಿ ಹಚ್ಚಿಕೊಳ್ಳಬಾರದು. ಹಾಗೆಯೇ ಮುಸ್ಲಿಮ್ ಕಲಾವಿದರನ್ನು ಅಂಗಡಿಗಳು ಮೆಹೆಂದಿ ಹಚ್ಚುವ ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಅಂಗಡಿಗಳಿಗೆ ಬೆದರಿಕೆ ಹಾಕಿದ್ದರು.
ಇದೇ ಸಮಯದಲ್ಲಿ ಪ್ರಕಾಶ್ ಚಂದ್ರ ಎಂಬವರ ಮೆಹೆಂದಿ ಸ್ಟಾಲ್ ನಲ್ಲಿ ಮುಸ್ಲಿಮ್ ಕಲಾವಿದರನ್ನು ನೇಮಕ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕರ್ಣಿ ಸೇನೆ, ಸ್ಟಾಲ್ ಗಳನ್ನು ಕಿತ್ತೆಸೆದಿದೆ. ಜೊತೆಗೆ ನಮ್ಮ ಅನುಮತಿ ಇಲ್ಲದೇ ನೀನು ಇನ್ನು ಮುಂದೆ ಅಂಗಡಿ ತೆರೆದರೆ ನಿನ್ನನ್ನು ಹತ್ಯೆ ಮಾಡುವುದಾಗಿ ಪ್ರಕಾಶ್ ಚಂದ್ರ ಅವರಿಗೆ ಬೆದರಿಕೆಯೊಡ್ಡಿದೆ.
ಇನ್ನೂ ಘಟನೆ ಸಂಬಂಧ ಪ್ರಕಾಶ್ ಚಂದ್ರ ಅವರು ನೀಡಿದ ದೂರಿನಂತೆ 20-25 ಅಪರಿಚಿತ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಣೆಯಿಂದ ಹಲ್ಲೆ, ಉದ್ದೇಶ ಪೂರ್ವ ಶಾಂತಿ ಕದಡುವಿಕೆ, ಅವಮಾನ, ಕ್ರಿಮಿನಲ್ ಬೆದರಿಕೆ, ಅಂಗಡಿಗಳಿಗೆ ದಾಳಿ ಮೊದಲಾದ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಇನ್ನು ಕೂಡ ಯಾರನ್ನೂ ಬಂಧಿಸಲಾಗಿಲ್ಲ.
ಇನ್ನಷ್ಟು ಸುದ್ದಿಗಳು…
ಬಿಗ್ ನ್ಯೂಸ್: ಕೊರೊನಾ ನಿಯಂತ್ರಣಕ್ಕೆ ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್?
ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಸ್ಥಗಿತಗೊಂಡ ತಕ್ಷಣ ಪ್ರಿಯಾಂಕಾ ಗಾಂಧಿ ಮಾಡಿದ್ದೇನು ಗೊತ್ತಾ?
ವ್ಯಾಪಾರ ಮಾಡಲು ಬಂದ ಖಾಸಗಿ ಸಂಸ್ಥೆಗಳು ರಾಜಕೀಯ ನಿರ್ಧರಿಸುತ್ತಿವೆ | ಟ್ವಿಟ್ಟರ್ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ
ಎನ್.ಮಹೇಶ್ ಗೆ ಬಿಎಸ್ ಪಿಯಿಂದ ಅನ್ಯಾಯ ಆಗಿಲ್ಲ | ಬಿಎಸ್ ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ