ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್ ಬ್ರಹ್ಮಾವರ ನಿಧನ
ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್ ಬ್ರಹ್ಮಾವರ ಅವರು ನಿಧನ ಹೊಂದಿದರು. ಅವರಿಗೆ 31ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಹಲವಾರು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದ್ದು, ಖ್ಯಾತ ಕಲಾವಿದ ಮನು ಹಂದಾಡಿ ಅವರ ತಂಡದಲ್ಲಿ ಕೂಡ ಗುರುತಿಸಿಕೊಂಡಿದ್ದರು.
ಮಂದಾರ ಬೈಕಾಡಿ, ಭೂಮಿಕಾ ರಂಗತಂಡ ಹಾರಾಡಿ, ದುರ್ಗಾ ಕಲಾ ತಂಡ, ಖ್ಯಾತ ನಿರ್ದೇಶಕ ರಾಜ್‌ಗುರು ಹೊಸಕೋಟೆ ತಂಡ, ಅರೆಹೊಳೆ ಪ್ರತಿಷ್ಠಾನದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಕನಸು ಕಾರ್ತಿಕ್ ಹಲವಾರು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದರು.
ಖಾಸಗಿ ವಾಹಿನಿಯ ಕುಂದಾಪುರ ಕನ್ನಡ ಹಾಸ್ಯ ಕಾರ್ಯಕ್ರಮದಲ್ಲಿ ತೊಡಗಿದ್ದರು. ಸಿನೆಮಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw