ವಿವಾಹ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ಕುಸಿದು ಬಿದ್ದು ಪಾದ್ರಿ ಸಾವು
15/07/2022
ಇಡುಕ್ಕಿ: ಮದುವೆ ನಡೆಸಿಕೊಡುತ್ತಿದ್ದ ಪಾದ್ರಿಯೊಬ್ಬರು ಕಾರ್ಯಕ್ರಮದ ನಡುವೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೆಕ್ಕಡಿ ಎಂಬಲ್ಲಿ ನಡೆದಿದೆ.
ಇಡುಕ್ಕಿ ಭದ್ರಸನ್ ನ ಮಲಂಕರ ಆರ್ಥೊಡಾಕ್ಸ್ ಚರ್ಚ್‌ನ ಹಿರಿಯ ಪಾದ್ರಿ ವಿಕಾರ್ ಎಲಿಯಾಸ್ ಕೊರ್ ಎಪಿಸ್ಕೋಪಾ ನಿಧನರಾದ ಫಾದರ್ ಆಗಿದ್ದು, ಕಳೆದ ದಿನ ವಿವಾಹ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಕುಸಿದು ಬಿದ್ದ ಫಾದರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ವಿಕಾರ್ ಎಲಿಯಾಸ್ ಕೊರ್ ಎಪಿಸ್ಕೋಪಾ ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka