ಕಾಸರಗೋಡು ಹೆಸರು ಬದಲಿಸಿ ರಾಜಕೀಯ ಮಾಡಲು ನಾವು ಬಿಜೆಪಿಗರಲ್ಲ ಎಂದ ಎಲ್ ಡಿಎಫ್ | ಪಿಣರಾಯಿ ವಿಜಯನ್ ಏನಂದ್ರು? - Mahanayaka

ಕಾಸರಗೋಡು ಹೆಸರು ಬದಲಿಸಿ ರಾಜಕೀಯ ಮಾಡಲು ನಾವು ಬಿಜೆಪಿಗರಲ್ಲ ಎಂದ ಎಲ್ ಡಿಎಫ್ | ಪಿಣರಾಯಿ ವಿಜಯನ್ ಏನಂದ್ರು?

pinarai vijyan
30/06/2021

ತಿರುವನಂತಪುರಂ: ಗಡಿನಾಡು ಕಾಸರಗೋಡು ಜಿಲ್ಲೆಯ ಹಳ್ಳಿಗಳ ಹೆಸರನ್ನು ಮಲಯಾಳಂ ಹೆಸರುಗಳಾಗಿ ಬದಲಿಸಲು ಕೇರಳ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಕೇರಳ ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

ಈ ಸಂಬಂಧ ಕರೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ವದಂತಿಯೊಂದು ಹೇಗೆ ಸುದ್ದಿಯಾಗಿ ಬದಲಾಗುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದ್ದು, ಈ ಸುದ್ದಿ ಹೇಗೆ ಹುಟ್ಟಿಕೊಂಡಿತು ಎನ್ನುವುದೇ ನನಗೆ ಆಶ್ಚರ್ಯವಾಗುತ್ತಿದೆ. ಇದರ ಹಿಂದೆ ಏನಾದರೂ ಪಿತೂರಿ ಇದೆಯೇ ಎನ್ನುವುದನ್ನು ಕೂಡ ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದ್ದಾರೆ.


Provided by

 

ಕಾಸರಗೋಡು ಹಳ್ಳಿಗಳ ಹೆಸರು ಬದಲಾವಣೆಗೆ ಕೇರಳ ಸರ್ಕಾರ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕರ್ನಾಟಕ ಮುಖ್ಯಮಂತ್ರಿಯವರ ಪತ್ರ ನಮಗೆ ಇನ್ನೂ ತಲುಪಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

 

ಇನ್ನೂ ಕಾಸರಗೋಡಿನ ಹಳ್ಳಿಗಳ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ, ಕರ್ನಾಟಕ ಬಿಜೆಇ ನಾಯಕರ ಹೇಳಿಕೆಗೆ ಎಲ್ ಡಿಎಫ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಸರು ಬದಲಿಸಿ ರಾಜಕೀಯ ಮಾಡಲು ನಾವು ಬಿಜೆಪಿಯವರು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಸುದ್ದಿ