ಕಾಶ್ಮೀರ ಫೈಲ್ಸ್ : ಮನುಷ್ಯನೊಳಗಿನ ಪ್ರಾಣಿ ಸ್ವಭಾವ ಇನ್ನಾದರೂ ಬದಲಾಗಲಿ! - Mahanayaka
7:16 PM Thursday 23 - January 2025

ಕಾಶ್ಮೀರ ಫೈಲ್ಸ್ : ಮನುಷ್ಯನೊಳಗಿನ ಪ್ರಾಣಿ ಸ್ವಭಾವ ಇನ್ನಾದರೂ ಬದಲಾಗಲಿ!

kashmir files
14/03/2022

ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ  ಕಾಶ್ಮೀರ ಫೈಲ್ಸ್  ಚಿತ್ರ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖ ಚರ್ಚಾ ವಿಚಾರವಾಗಿದೆ.  ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯ, ಹತ್ಯೆಗಳ ಸತ್ಯ ಘಟನೆಯ ಚಿತ್ರ ಇದು ಎಂದು ಒಂದು ವರ್ಗ ಈ ಚಿತ್ರವನ್ನು ವೈಭವೀಕರಿಸಿದರೆ, ಇನ್ನೊಂದು ವರ್ಗ, ಕಾಶ್ಮೀರದಲ್ಲಿ ಕೇವಲ ಕಾಶ್ಮೀರ ಪಂಡಿತರ ಕೊಲೆ ಮಾತ್ರ ನಡೆದಿರುವುದಲ್ಲ. ಎಲ್ಲಾ ವರ್ಗಗಳ ಕೊಲೆ ನಡೆದಿದೆ. ಕೇವಲ ಕಾಶ್ಮೀರ ಪಂಡಿತರ ಕೊಲೆಗಳನ್ನು ಮಾತ್ರವೇ ಯಾಕೆ ವೈಭವಿಕರಿಸಲಾಗುತ್ತಿದೆ ಎನ್ನುವ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇನ್ನೊಂದೆಡೆ, ಚಿತ್ರದಲ್ಲಿರುವ ನಿಜ ಕಥೆಯ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ವಿ.ಪಿ. ಸಿಂಗ್ ಸರ್ಕಾರ ಅಂದಿನ ಕಾಲದಲ್ಲಿ ಆಡಳಿತ ನಡೆಸುತ್ತಿತ್ತು. ಹಾಗಿದ್ದರೆ, ಈ ಕೊಲೆಗಳಿಗೆ ಜವಾಬ್ದಾರಿ ಯಾರು? ಎನ್ನುವ ಪ್ರಶ್ನೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕೇಳಿ ಬಂದಿದೆ.

ಯಾವುದೇ ಸಮುದಾಯದ ಕೊಲೆಯಾದರೂ, ಅದು ಖಂಡನಾರ್ಹವಾದದ್ದು. ಯಾರ ಮೇಲೆ ದೌರ್ಜನ್ಯ ನಡೆದರೂ ಅದು ಕೂಡ ಖಂಡನಾರ್ಹವಾದದ್ದು.  ಈ ದೇಶದಲ್ಲಿ ಜಾತಿಯ ಆಧಾರದಲ್ಲಿ, ಧರ್ಮದ ಆಧಾರದಲ್ಲಿ, ಸಂಘಟನೆಗಳ ಆಧಾರದಲ್ಲಿ, ಪಕ್ಷಗಳ ಆಧಾರದಲ್ಲಿ ನಡೆದ ಕೊಲೆಗಳು, ದೌರ್ಜನ್ಯಗಳು ಅಷ್ಟಿಷ್ಟಲ್ಲ. ಅವುಗಳನ್ನು ಹೇಗೆ ವ್ಯಾಖ್ಯಾನ ಮಾಡಬೇಕು ಎನ್ನುವುದು ಒಂದು ಸವಾಲು ಕೂಡ. ಕಾಶ್ಮೀರ ಪಂಡಿತರ  ಹತ್ಯೆಯೋ, ದೌರ್ಜನ್ಯವೋ ಒಂದು ಇತಿಹಾಸ. ಅಂತೆಯೇ ಈ ದೇಶದಲ್ಲಿ ದಲಿತರ ಮಾರಣಹೋಮವೂ ನಡೆದಿದೆ, ಬೌದ್ಧರ ಮಾರಣಹೋಮವೂ ನಡೆದಿದೆ. ಮುಸ್ಲಿಮರ, ಕ್ರೈಸ್ತರ ಪ್ರತಿಯೊಂದು ಸಮಾಜದ ಮೇಲೆಯೂ ದೌರ್ಜನ್ಯಗಳು ನಡೆದಿದೆ. ಒಂದೊಂದು ಸಮಾಜವೂ ಇತಿಹಾಸವನ್ನು ನೆನಪಿಟ್ಟುಕೊಂಡಿದೆ. ಇತಿಹಾಸದಲ್ಲಿ ನಡೆದವುಗಳು ಒಂದು ಪಾಠವಾಗಬಹುದು. ಆದರೆ ಇತಿಹಾಸದಲ್ಲಿ ನಡೆದ ಘಟನೆಗಳನ್ನು ಮುಂದಿಟ್ಟುಕೊಂಡು  ಈಗ, ಅದಕ್ಕೆ ಪ್ರತ್ಯುತ್ತರ ನೀಡುವುದು ಮೂರ್ಖತನವಲ್ಲದೇ ಮತ್ತಿನ್ನೇನು ಎನ್ನುವ ಪ್ರಶ್ನೆಗಳು ಸದ್ಯ ಕೇಳಿ ಬಂದಿದೆ.

ಕಾಶ್ಮೀರ ಫೈಲ್ಸ್ ಚಿತ್ರ ಬಿಡುಗಡೆಯಾಗಿರುವುದು ಸ್ವಾಗತಾರ್ಹವೇ ಆಗಿದೆ. ಅದೇ ರೀತಿಯಲ್ಲಿ ಪ್ರತಿಯೊಂದು ಜಾತಿ, ಧರ್ಮಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಿನಿಮಾಗಳ ಬಿಡುಗಡೆಗೆ ಅನುಮತಿ ದೊರೆಯಬೇಕಿದೆ. ಸಾಮಾಜಿಕ ದೌರ್ಜನ್ಯ ಕೊನೆಯಾಗಬೇಕಾದರೆ, ಪ್ರತಿಯೊಬ್ಬರ ಮನಸ್ಸು ಕೂಡ ಬದಲಾಗಬೇಕು. ಧರ್ಮ-ಜಾತಿಗಳ ನಡುವಿನ ವಿಕಾರ ರೂಪಗಳು ಜನರ ಅರಿವಿಗೆ ಬರಬೇಕು. ಇನ್ನೊಬ್ಬರ ಭಾವನೆಗಳನ್ನು ಪ್ರತಿಯೊಬ್ಬರ ಅರಿಯಲು ಪ್ರಯತ್ನಿಸಬೇಕು. ಕಾಶ್ಮೀರ ಫೈಲ್ಸ್, ನಂತೆಯೇ  ದೇಶದಲ್ಲಿ ನಡೆದ ದೌರ್ಜನ್ಯಗಳ, ಸತ್ಯ ಘಟನೆಗಳನ್ನಾಧರಿಸಿದ ಚಿತ್ರಗಳು ಬರಲಿ, ಇದೊಂದು ರಾಜಕೀಯ ಲಾಭಕ್ಕೆ ಬಳಕೆಯಾಗದೇ, ಮನುಷ್ಯನೊಳಗಿನ ಪ್ರಾಣಿ ಸ್ವಭಾವ ದೂರವಾಗಿ ಮನುಷ್ಯತ್ವ ಬೆಳೆಯಲು ಸಹಕಾರಿಯಾಗಲಿ ಎನ್ನುವುದೇ ಸದ್ಯದ ಆಶಯವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಂತಾರಾಷ್ಟ್ರೀಯ ಮೇಳದಲ್ಲಿ ಪರ್ಸ್ ಎಗರಿಸಿದ ನಟಿ ಅರೆಸ್ಟ್!

ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಗೆದ್ದಿದ್ದೇವೆ: ಸಚಿವೆ ಶೋಭಾ ಕರಂದ್ಲಾಜೆ

ಆಟೋಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್: ಕೆನಡಾದಲ್ಲಿ ಭಾರತ ಮೂಲದ ಐವರು ವಿದ್ಯಾರ್ಥಿಗಳ ಸಾವು

ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಪೊಲೀಸ್ ಕಾನ್ ಸ್ಟೇಬಲ್ ದುರಂತ ಸಾವು!

ಕಾರುಗಳ ಮುಖಾಮುಖಿ ಡಿಕ್ಕಿ: ಓಮಿನಿ ಕಾರಿನಲ್ಲಿದ್ದ ದಂಪತಿಯ ದಾರುಣ ಸಾವು

ಇತ್ತೀಚಿನ ಸುದ್ದಿ