ಕಾಶ್ಮೀರಿ ಟ್ಯಾಕ್ಸಿ ಚಾಲಕರು ನನಗೆ ಸ್ವಂತ ಸಹೋದರಿ ಎಂಬಂತೆ ಸಹಾಯ ಮಾಡಿದರು: ತಂದೆಯನ್ನ ಕಳೆದುಕೊಂಡ ಆರತಿ ಭಾವುಕ ನುಡಿ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡವರ ಕಥೆ ಒಬ್ಬೊಬ್ಬರದ್ದು ಒಂದೊಂದಾಗಿದೆ. ಆದ್ರೆ ಅಂತಿಮವಾಗಿ ಅವರು ತಮ್ಮವರನ್ನ ಕಳೆದುಕೊಂಡಿದ್ದಾರೆ.
ಮೃತಪಟ್ಟವರ ಪೈಕಿ ಕೊಚ್ಚಿ ಮೂಲದ ಎನ್.ರಾಮಚಂದ್ರನ್ ಅವರ ಪುತ್ರಿ ಆರತಿ ಆರ್. ಮೆನನ್ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಘೋರ ಘಟನೆಯನ್ನ ವಿವರಿಸಿದ್ದಾರೆ.
ನಾವು ಮಧ್ಯಾಹ್ನ 2:10ರ ಸುಮಾರಿಗೆ ಆ ಸ್ಥಳಕ್ಕೆ ತಲುಪಿದ್ದೆವು. ನಾವು ಅಲ್ಲಿಗೆ ತಲುಪಿ 10 ನಿಮಿಷಗಳಲ್ಲಿ ದಾಳಿ ಆರಂಭ ಆಗಿತ್ತು. ದಾಳಿ ಮಾಡಿದ ವ್ಯಕ್ತಿ ಸಾಮಾನ್ಯ ಉಡುಪಿನಲ್ಲಿದ್ದ. ಆತ ಗುಂಡು ಹಾರಿಸಲು ಆರಂಭಿಸುವ ಮುನ್ನ ಎಲ್ಲರನ್ನೂ ಮಲಗಲು ಹೇಳಿದ್ದ. ನಮ್ಮ ಬಳಿಗೆ ಬಂದು ಕಲಿಮಾ ನಂತಹ ಒಂದು ಪದ ಎರಡು ಬಾರಿ ಹೇಳಿದನು. ಅದು ನಮಗೆ ಅರ್ಥವಾಗುತ್ತಿಲ್ಲ ಎಂದು ನಾವು ಹೇಳಿದ ವೇಳೆ ನನ್ನ ತಂದೆಗೆ ಗುಂಡು ಹಾರಿಸಿದನು. ನಾನು ತಂದೆಯನ್ನು ಭೀತಿಯಿಂದ ತಬ್ಬಿಕೊಂಡಾಗ ನನ್ನ ತಲೆಗೂ ಬಂದೂಕು ಇಟ್ಟ ಗುಂಡು ಹಾರಿಸುವುದಕ್ಕೋ ಅಥವಾ ಹೆದರಿಸುವುದಕ್ಕೋ ತಿಳಿದಿಲ್ಲ. ಈ ವೇಳೆ ನನ್ನ ಅವಳಿ ಪುತ್ರರು ಕಿರುಚಿಕೊಂಡಾಗ ಆತ ಅಲ್ಲಿಂದ ಹೊರಟು ಹೋದ ಎಂದು ಅವರು ಹೇಳಿದರು.
ಇದು ಭಯೋತ್ಪಾದಕ ದಾಳಿ ಎಂದು ಗೊತ್ತಾಗುತ್ತಿದ್ದಂತೆಯೇ ಎಲ್ಲರೂ ಓಡಿ ಹೋದರು. ನಾನು ಮೊಬೈಲ್ ಸಿಗ್ನಲ್ ಕವರೇಜ್ ಸಿಗುವವರೆಗೂ ಓಡಿ ಹೋದೆ ಬಳಿಕ ನನ್ನ ಟ್ಯಾಕ್ಸಿ ಚಾಲಕ ಕಾಶ್ಮೀರಿ ವ್ಯಕ್ತಿ ಮುಸಾಫಿರ್ ನಿಂದ ಸಹಾಯ ಕೇಳಿದೆ ಎಂದರು.
ಈ ಸಮಯದಲ್ಲಿ ಕಾಶ್ಮೀರಿ ಟ್ಯಾಕ್ಸಿ ಚಾಲಕರಾದ ಮುಸಾಫಿರ್ ಮತ್ತು ಸಮೀರ್ ನನ್ನ ಸಹೋದರರಂತೆ ನನಗೆ ನೆರವಾದರು. ನಾನು ಬೆಳಗ್ಗೆ 3 ಗಂಟೆಗೆ ಶವಾಗಾರದ ಮುಂದೆ ಕಾಯಬೇಕಿತ್ತು. ಬೆಳಿಗ್ಗೆ 6 ಗಂಟೆಗೆ ಮತ್ತೆ ಹಿಂತಿರುಗಬೇಕಿತ್ತು. ಆ ಸಂದರ್ಭಗಳಲ್ಲಿ ಅವರು ನನ್ನನ್ನು ಸ್ವಂತ ಸಹೋದರಿಯ ಜೊತೆಗೆ ಬರುವಂತೆ ನನ್ನೊಂದಿಗೆ ಬಂದರು. ಅವರಿಗೆ ನಾನು “ನಿಮ್ಮನ್ನು ಅಲ್ಲಾಹನು ರಕ್ಷಿಸುತ್ತಾನೆ” ಎಂದು ಹೇಳಿದೆ ಎಂದು ಆರತಿ ಮಾಧ್ಯಮಗಳಿಗೆ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: