ಕೊವಿಡ್ ಹೆಸರಿನಲ್ಲಿ ಹೊಟೇಲ್ ನೊಳಗೆ ನುಗ್ಗಿ ಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಪೇದೆ! - Mahanayaka

ಕೊವಿಡ್ ಹೆಸರಿನಲ್ಲಿ ಹೊಟೇಲ್ ನೊಳಗೆ ನುಗ್ಗಿ ಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಪೇದೆ!

police
13/04/2021

ಕೊಯಂಬತ್ತೂರು: ರಾತ್ರಿ ವೇಳೆ ಹಸಿವಿನಿಂದ ಹೊಟೇಲ್ ಗೆ ಊಟ ಮಾಡಲು ಬಂದ ಜನರಿಗೆ ಪೊಲೀಸ್ ಪೇದೆಯೋರ್ವ ಹೊಟೇಲ್ ಗೆ ನುಗ್ಗಿ ಹಲ್ಲೆ ನಡೆಸಿರುವ ದಾರುಣ ಘಟನೆ ನಡೆದಿದ್ದು, ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತಮಿಳುನಾಡಿನಲ್ಲಿ ರಾತ್ರಿ 11 ಗಂಟೆಯವರೆಗೆ ಹೋಟೆಲ್​ ಹಾಗೂ ರೆಸ್ಟಾರೆಂಟ್​​ಗಳನ್ನ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ರಾತ್ರಿ 10.21ರ ಸುಮಾರಿಗೇ ಹೋಟೆಲ್​​ಗೆ ನುಗ್ಗಿದ ಪೊಲೀಸ್​ ಪೇದೆ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಈ ಹುಚ್ಚಾಟ ಮೆರೆದಿರುವ ಪೊಲೀಸ್ ಪೇದೆಯ ಹೆಸರು ಮುತ್ತು ಎಂದು ತಿಳಿದು ಬಂದಿದೆ. ಇಲ್ಲಿನ ಶ್ರೀರಾಜಾ ಎನ್ನುವ ಹೊಟೇಲ್ ಗೆ ನುಗ್ಗಿದ ಪೇದೆ ಮಕ್ಕಳು ಮಹಿಳೆಯರು ಎನ್ನದೇ ಲಾಠಿ ಬೀಸಿದ್ದಾನೆ. ಘಟನೆ ಸಂಬಂಧ ಹೊಟೇಲ್ ಮಾಲಿಕ ಬಿ.ಮೋಹನರ್ ಅವರು ಕೊಯಂಬತ್ತೂರು ಕಮಿಷನರ್ ಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ