ಕತ್ತೆಗಳ ಮೇಲೆ ಇವಿಎಂ ಸಾಗಿಸಿದ ಅಧಿಕಾರಿಗಳು | ಕಾರಣ ಏನು ಗೊತ್ತಾ? - Mahanayaka
5:09 PM Wednesday 11 - December 2024

ಕತ್ತೆಗಳ ಮೇಲೆ ಇವಿಎಂ ಸಾಗಿಸಿದ ಅಧಿಕಾರಿಗಳು | ಕಾರಣ ಏನು ಗೊತ್ತಾ?

donkeys carry evm
06/04/2021

ಚೆನ್ನೈ: ಚುನಾವಣೆಗೆ ಇವಿಎಂ ಮೆಶಿನ್ ಗಳನ್ನು ಸರ್ಕಾರಿ ಬಸ್ ನಲ್ಲಿಯೋ, ವಾಹನದಲ್ಲಿಯೋ ಕೊಂಡು ಹೋಗುವುದು ನೀವು ಕಂಡಿರಬಹುದು. ಆದರೆ, ತಮಿಳುನಾಡಿನ ಈರೋಡ್, ದಿಂಡಿಗಲ್ ಮತ್ತು ಧರ್ಮಾಪುರಿಗಳಲ್ಲಿ ಇವಿಎಂನ್ನು ಸಾಗಿಸಿದ್ದು ಹೇಗೆ ಎಂದು ನೋಡಿದರೆ ಅಚ್ಚರಿಗೀಡಾಗುತ್ತೀರಿ.

 

ಈರೋಡ್ ಅಂತಿಯೂರ್ ವಿಧಾನಸಭೆ ವ್ಯಾಪ್ತಿಯಲ್ಲಿನ ಕದಿರಿಮಲೈ ಗ್ರಾಮ, ದಿಂಡಿಗಲ್ ಜಿಲ್ಲೆಯ ನಥಾಮ್ ಮತ್ತು ಧರ್ಮಾಪುರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಇವಿಎಂ, ವಿವಿಪ್ಯಾಟ್ ಮತ್ತು ಮತದಾನದ ಇತರೆ ಸಾಮಗ್ರಿಗಳನ್ನು ಮತಗಟ್ಟೆಗೆ ಕತ್ತೆಗಳ ಮೇಲಿರಿಸಿ ಸಾಗಿಸಲಾಗಿದೆ

 

ಕತ್ತೆಗಳ ಜತೆಗೆ ಪೊಲೀಸರು, ಚುನಾವಣಾ ಅಧಿಕಾರಿಗಳು ನಡೆದು ಸಾಗಿದ್ದಾರೆ. ಇಷ್ಟ ವರ್ಷಗಳಿಂದ ಮತದಾನ ಮಾಡುತ್ತಿದ್ದರೂ ಈ ಗ್ರಾಮಸ್ಥರಿಗೆ ಒಂದು ರಸ್ತೆ ಮಾಡಿಕೊಡಲು ಇಲ್ಲಿನ ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ.

 

ಕತ್ತೆಗಳ ಮೇಲೆ ಇವಿಎಂ ಸಾಗಿಸಿರುವುದು ಈ ಅವ್ಯವಸ್ಥೆಯನ್ನು ಅಣಕಿಸಿದಂತೆ ಕಂಡು ಬಂದಿದೆ. ಪ್ರತೀ ವರ್ಷವೂ ಚುನಾವಣೆ ಬರುತ್ತಿದೆ. ತಾವು ಆರಿಸುವ ಜನಪ್ರತಿನಿಧಿಗಳು ತಮ್ಮನ್ನು ಉದ್ಧಾರ ಮಾಡುತ್ತಾರೆ ಅಂದುಕೊಂಡು ಇಲ್ಲಿನ ಜನರು ವೋಟು ಹಾಕುತ್ತಲೇ ಇದ್ದಾರೆ. ಆದರೆ, ಪ್ರತೀ ವರ್ಷ ಚುನಾವಣೆ ಸಂದರ್ಭದಲ್ಲಿ ಈ ಗ್ರಾಮಕ್ಕೆ ಕತ್ತೆಗಳ ಜೊತೆಗೆ ಗ್ರಾಮಸ್ಥರು ಬರುತ್ತಾರೆ.

 

ಇತ್ತೀಚಿನ ಸುದ್ದಿ