1 ಲೀಟರ್ ಕತ್ತೆಯ ಹಾಲಿಗೆ 10 ಸಾವಿರ ರೂಪಾಯಿ! | ಒಂದು ಚಮಚ ಕತ್ತೆಯ ಹಾಲಿಗೆ 100 ರೂಪಾಯಿ!
ಒಂದು ಕಾಲದಲ್ಲಿ ಕತ್ತೆಯ ಹಾಲು ಕುಡಿಯುವುದೆಂದರೆ, ಅಪಹಾಸ್ಯದ ಮಾತಾಗಿತ್ತು. ಆದರೆ, ಇದೀಗ ಕತ್ತೆಯ ಹಾಲಿಗೆ ಇರುವ ಬೇಡಿಕೆ ಹಸುವಿನ ಹಾಲಿಗೆ ಕೂಡ ಇಲ್ವಂತೆ! ಹಸುವಿನ ಹಾಲಿಗೆ ಒಂದು ಲೀಟರ್ ಗೆ 44 ರೂಪಾಯಿಗಳಾಗಿದ್ದರೆ, ಕತ್ತೆ ಹಾಲು ಒಂದು ಲೀಟರ್ ಗೆ ಬರೋಬ್ಬರಿ 10 ಸಾವಿರ ರೂಪಾಯಿಗಳಾಗಿವೆ.
ಹೌದು…! ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಕತ್ತೆಯ ಹಾಲಿಗೆ 1 ಲೀಟರ್ ಗೆ 10 ಸಾವಿರ ರೂಪಾಯಿಗಳಂತೆ. ಕತ್ತೆಯ ಹಾಲಿನಲ್ಲಿ ಅತ್ಯಧಿಕ ರೋಗ ನಿರೋಧಕ ಶಕ್ತಿಯಿದ್ದು, ಈ ಹಾಲನ್ನು ಕುಡಿಯುವುದರಿಂದ, ಕೊರೊನಾದಂತಹ ಸಾಂಕ್ರಾಮಿಕ ರೋಗಗಳನ್ನು ಎದುರಿಸಬಹುದು ಎಂದು ಮಾರಾಟಗಾರರು ಹೇಳುತ್ತಿದ್ದು, ಹೀಗಾಗಿ ಕತ್ತೆಯ ಹಾಲಿಗೆ ಭಾರೀ ಬೇಡಿಕೆ ಬಂದಿದೆ.
ಹಿಂಗೋಲಿಯ ಸಮೀಪದ ಜಿಲ್ಲೆಯಿಂದಲೂ ಆಗಮಿಸುತ್ತಿರುವ ಜನರು ಕತ್ತೆಯ ಹಾಲಿಗಾಗಿ ಮುಗಿಬೀಳುತ್ತಿದ್ದಾರೆ. ಕತ್ತೆಯ ಹಾಲು ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸುತ್ತದೆ. ಮಕ್ಕಳಲ್ಲಿ ನ್ಯುಮೋನಿಯಾ ಉಂಟಾಗದಂತೆ ಕತ್ತೆಯ ಹಾಲು ತಡೆಯುತ್ತದೆ. ಕೆಮ್ಮು, ಜ್ವರ, ಕಫ ಮೊದಲಾದ ಕಾಯಿಲೆಗಳಿರುವ ಕೊರೊನಾ ರೋಗಿಗೆ ರೋಗ ನಿರೋಧಕ ಶಕ್ತಿಯನ್ನು ತುಂಬಲು ಕತ್ತೆಯ ಹಾಲು ಕೆಲಸ ಮಾಡುತ್ತದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.
ಅಂದ ಹಾಗೆ ಇದೀಗ ಈ ಜಿಲ್ಲೆಗಳಲ್ಲಿ ಒಂದು ಚಮಚ ಕತ್ತೆಯ ಹಾಲಿಗೆ 100 ರೂಪಾಯಿ ಬೆಲೆಯಾಗಿದ್ದು, ಒಂದು ಲೀಟರ್ ಕತ್ತೆಯ ಹಾಲಿಗೆ 10 ಸಾವಿರ ರೂಪಾಯಿ ಬೆಲೆಯಾಗಿದೆ. ಕತ್ತೆಯ ಹಾಲು ಚರ್ಮ ಮತ್ತು ದೇಹ ಎರಡಕ್ಕೂ ಪೋಷಕಾಂಶವನ್ನು ಒದಗಿಸುತ್ತದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.
ಇನ್ನೂ ಕತ್ತೆಯ ಹಾಲಿನಿಂದ ಕೊರೊನಾ ಸೋಂಕು ಗುಣವಾಗುತ್ತದೆ ಎಂಬ ಬಗ್ಗೆ ಇಲ್ಲಿನ ಸ್ಥಳೀಯ ವೈದ್ಯ ವಿಎನ್ ರಾಡ್ಜ್ ಪ್ರತಿಕ್ರಿಯಿಸಿ, ಇದು ಸಂಪೂರ್ಣ ತಪ್ಪು ಅಭಿಪ್ರಾಯವಾಗಿದ್ದು, ಹಣಕ್ಕಾಗಿ ಕೆಲವರು ಸುಳ್ಳು ಪ್ರಚಾರ ನಡೆಸುತ್ತಿದೆ. ಇಂತಹವರನ್ನು ಆಡಳಿತವು ನಿಯಂತ್ರಿಸಬೇಕು ಎಂದು ಹೇಳಿದ್ದಾರೆ. ಜೊತೆಗೆ ಇಂತಹ ವಿಚಾರಗಳನ್ನು ಅರಿಯದೇ ಕುರುಡಾಗಿ ನಂಬಬಾರದು ಎಂದು ಸಲಹೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವಿಶ್ವ ಮಾನವ ಹಕ್ಕುಗಳ ದಿನಾಚರಣೆ | ಸಂತ್ರಸ್ತರ ಪಾಲಿನ ಆಶಾಕಿರಣ ‘ಸಿಕ್ರಂ’: ಡಾ.ದೇವರಾಜು.ಎಸ್.ಎಸ್.
ವಾಹನ ಇನ್ಸೂರೆನ್ಸ್ ನೆಪದಲ್ಲಿ ಕರೆದು ಶ್ರೀರಾಮಸೇನೆಯ ಕಾರ್ಯಕರ್ತನಿಗೆ ಹಲ್ಲೆ
ಪತ್ನಿ ನಿದ್ದೆಗೆ ಜಾರಿದ್ದ ವೇಳೆ ಪತಿಯಿಂದ ಹೀನ ಕೃತ್ಯ: ನಡೆಯಿತು ಭೀಕರ ಕೊಲೆ
ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಂದ ಪುಂಡಾಟಿಕೆ: ವಿಡಿಯೋ ವೈರಲ್ ಆದ ಬಳಿಕ ನಡೆದದ್ದೇನು?
ಮಾಸ್ಕ್ ಹಾಕಿಲ್ಲ ಎಂದು ಮಗಳ ಎದುರೇ ತಂದೆಯ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ | ಬಿಕ್ಕಿಬಿಕ್ಕಿ ಅತ್ತ ಮಗಳು
2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಪಡೆದುಕೊಂಡರೂ ಇಬ್ಬರಿಗೆ ವಕ್ಕರಿಸಿದ ಒಮಿಕ್ರಾನ್