ಕಾವೇರಿ ನದಿ ದಾಟುವ ವೇಳೆ ದುರಂತ: ಹಲವು ಭಕ್ತರು ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಶಂಕೆ
ರಾಮನಗರ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಆಚರಣೆಗೆ ಕಾಲ್ನಡಿಗೆ ಮೂಲಕ ಮಹಾದೇಶ್ವರ ಬೆಟ್ಟಕ್ಕೆ ಕನಕಪುರ ತಾಲೂಕಿನ ಸಂಗಮ ಮಾರ್ಗವಾಗಿ ತೆರಳುತ್ತಿದ್ದ ಭಕ್ತರು ಕಾವೇರಿ ನದಿ ದಾಟುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿರುವ ಘಟನೆ ಬೊಮ್ಮಸಂದ್ರದ ಬಳಿ ನಡೆದಿದೆ.
ಘಟನೆಯಲ್ಲಿ ಹಲವರನ್ನು ರಕ್ಷಿಸಿದ್ದು ಇನ್ನೂ ಹಲವು ಭಕ್ತರು ನದಿಯಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ರಾಮನಗರ ಜಿಲ್ಲೆ ಸೇರಿದಂತೆ ಬೆಂಗಳೂರಿನ ವಿವಿಧ ಭಾಗದಿಂದ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ, ಕನಕಪುರ, ದೊಡ್ಡ ಆಲಹಳ್ಳಿ, ಏಳಗಳ್ಳಿ, ಹೆಗ್ಗನೂರು, ಕುಪ್ಪೆದೊಡ್ಡಿ ಮಾರ್ಗವಾಗಿ ಸಂಗಮ ಬಳಿಯ ಬೊಮ್ಮಸಂದ್ರ ಬಳಿ ಕಾವೇರಿ ನದಿ ದಾಟಿಕೊಂಡು ಮಹಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದರು. ಈ ವೇಳೆ ವೃದ್ಧೆಯೊಬ್ಬರ ಶವ ಕಾವೇರಿ ನದಿಯ ಬಳಿ ಪತ್ತೆಯಾಗಿದ್ದು, ಇನ್ನೂ ಹಲವು ಭಕ್ತರು ಬೊಮ್ಮಸಂದ್ರದ ಬಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು ಎಂದು ಹೇಳಲಾಗುತ್ತಿದೆ.
ಮಹಾದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಸಾವಿರಾರು ಭಕ್ತರಿಗೆ ಅರಣ್ಯ ಇಲಾಖೆಯಿಂದ ಆಗಲಿ, ಪೊಲೀಸ್ ಇಲಾಖೆ ಅಥವಾ ತಾಲೂಕು ಆಡಳಿತದಿಂದ ವತಿಯಿಂದ ನದಿ ದಾಟಲು ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಈ ರೀತಿಯ ಅವಗಡ ಸಂಭವಿಸಲು ಕಾರಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸೀಮಂತ ಕಾರ್ಯಕ್ರಮ ವೇಳೆ ಅಡುಗೆ ಸಿಲಿಂಡರ್ ಸ್ಫೋಟ: ನಾಲ್ವರ ಸಾವು, 19 ಮಂದಿ ಗಂಭೀರ
ಉಕ್ರೇನ್ ನಲ್ಲಿ ಅನ್ನ ನೀರಿಗಾಗಿ ಪರದಾಡುತ್ತಿರುವ ಭಾರತೀಯರು!
ನನಗೆ ಮದ್ದುಗುಂಡು ನೀಡಿ, ಪ್ರಯಾಣ ವ್ಯವಸ್ಥೆ ಬೇಡ | ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ತಿರುಗೇಟು
ಮಚ್ಚಿನಿಂದ ಹೊಡೆದು ಪತಿಯಿಂದ ಪತ್ನಿಯ ಕೊಲೆ
ದಲಿತ ಯುವಕನ ಕೊಲೆ ಪ್ರಕರಣ: ಆರೋಪಿ ಪೊಲೀಸ್ ವಶಕ್ಕೆ