ಸರ್ಕಾರಕ್ಕೆ ಮತ್ತೆ ತಲೆನೋವು: ಕವಿತೆ, ಲಲಿತ ಪ್ರಬಂಧ ವಾಪಸ್ ಪಡೆದ ಇಬ್ಬರು ಲೇಖಕರು
ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಕವಿತೆ ಹಾಗೂ ಲಲಿತ ಪ್ರಬಂಧವನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಮೂಡ್ನಾಕೂಡು ಚಿನ್ನಾಸ್ವಾಮಿ ಹಾಗೂ ಈರಣ್ಣ ಕಂಬಳಿ ಅವರು ವಾಪಸ್ ಪಡೆದಿಯುವ ಮೂಲಕ ನೂತನ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ವಿರೋಧಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಈ ಹಿಂದೆ ಜಿ.ರಾಮಕೃಷ್ಣ, ಸಿದ್ದರಾಮಯ್ಯ ಹಾಗೂ ದೇವನೂರ ಮಹದೇವ ಅವರು ತಾವು ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದರು. ಇದೀಗ ಮೂಡ್ನಾಕೂಡು ಚಿನ್ನಾಸ್ವಾಮಿ, ಈರಣ್ಣ ಕಂಬಳಿ ಕೂಡ ಅನುಮತಿ ಹಿಂದೆಗೆದುಕೊಂಡಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರ ಬರೆದಿರುವ ಮೂಡ್ನಾಕೂಡು ಚಿನ್ನಾಸ್ವಾಮಿ, ಈರಣ್ಣ ಕಂಬಳಿ, 5ನೇ ತರಗತಿಗೆ ಪಠ್ಯವಾಗಿರುವ ‘ನನ್ನ ಕವಿತೆಗೆ’ ಎಂಬ ಕವನವನ್ನು ಹಿಂಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಈರಣ್ಣ ಕಂಬಳಿ ಅವರು 10ನೇ ತರಗತಿಗೆ ಪಠ್ಯವಾಗಿರುವ ‘ಹೀಗೊಂದು ಟಾಪ್ ಪ್ರಯಾಣ’ ಲಲಿತ ಪ್ರಬಂಧವನ್ನು ಮುಂದುವರೆಸಬಾರದೆಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವಿಮಾನ ನಿಲ್ದಾಣದ ಪ್ರದರ್ಶನ ಫಲಕದಲ್ಲಿ ಅಶ್ಲೀಲ ಚಿತ್ರ ಪ್ರಸಾರ!
ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಗೆ ಗೇಟ್ ಪಾಸ್!
ಪಠ್ಯಪುಸ್ತಕದ ವಿಚಾರದಲ್ಲಿ ಸತ್ಯದ ವಿಷಯ ಮರೆಮಾಚುವ ಕೆಲಸ ಆಗ್ತಿದೆ: ಸದಾನಂದ ಗೌಡ
ಮೇ 31, ಜೂನ್ 1ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಮುಸ್ಲಿಂ ಸಮಾವೇಶ