ದೇವಸ್ಥಾನದಲ್ಲಿ ಕೇಳಬಾರದ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ನಟಿ ಸಮಂತಾ ಆಕ್ರೋಶ!
ಸಿನಿಡೆಸ್ಕ್: ನಟಿ ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಅವರ ವಿಚ್ಛೇದನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಕ್ಕೆ ಸಾರ್ವಜನಿಕವಾಗಿಯೇ ಸಮಂತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ದೇವಸ್ಥಾನ ಭೇಟಿಯ ವೇಳೆಯಲ್ಲಿ ಕೂಡ ತಮ್ಮ ವೈಯಕ್ತಿಕ ಬದುಕನ್ನು ಕೆಣಕುತ್ತಿರುವುದರ ವಿರುದ್ಧ ಅವರು ಆಕ್ರೋಶಕ್ಕೀಡಾಗಿದ್ದಾರೆ.
ಸಮಂತಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು ಅವರ ವಿಚ್ಛೇದನದ ವಿಚಾರವನ್ನೇ ಪತ್ರಕರ್ತರು ಪ್ರಶ್ನಿಸುತ್ತಿದ್ದಾರೆ. ಇಂತಹ ಪ್ರಶ್ನೆಗಳಿಂದ ಸಮಂತಾ ಅವರು ರೋಸಿ ಹೋಗಿದ್ದು, ಸೆ.18ರಂದು ಮುಂಜಾನೆ ತಿರುಪತಿಗೆ ಅವರು ಭೇಟಿ ನೀಡಿದ್ದರು. ಸಮಂತಾ ಅವರು ದೇವಸ್ಥಾನಕ್ಕೆ ಬರುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಪತ್ರಕರ್ತರು ಹಾಗೂ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಓರ್ವ ವ್ಯಕ್ತಿ ಸಮಂತಾ ಅವರ ಸಂಸಾರದ ಗುಟ್ಟನ್ನು ಬಾಯಿಬಿಡಿಸಲು ಯತ್ನಿಸಿದ್ದಾನೆ. ಈ ವೇಳೆ. ಕೋಪಗೊಂಡ ಅವರು, ಇಲ್ಲಿಯೂ ಅದೇ ಪ್ರಶ್ನೆಯೇ? ದೇವಸ್ಥಾನಕ್ಕೆ ಬಂದರೂ ಇಂತಹ ಪ್ರಶ್ನೆಗಳನ್ನು ಮಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.
ಇನ್ನಷ್ಟು ಸುದ್ದಿಗಳು…
ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!
ನಟ ಸೋನುಸೂದ್ ಅವರಿಂದ 20 ಕೋಟಿಗೂ ಅಧಿಕ ತೆರಿಗೆ ವಂಚನೆ!
ಮತ್ತೆ ಮೈತ್ರಿಯಾಗುತ್ತಾ ಶಿವಸೇನೆ, ಬಿಜೆಪಿ | ಕುತೂಹಲಕ್ಕೆ ಕಾರಣವಾದ ಠಾಕ್ರೆ ಹೇಳಿಕೆ
ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!
ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ