ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ಲಕ್ಷಾಂತರ ರೂಪಾಯಿ ವಂಚನೆ: ಆರೋಪಿ ಸೆರೆ
ಬೆಂಗಳೂರು: ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ವಂಚಿಸುತ್ತಿದ್ದ ಅರೋಪಿಯನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಬಗ್ಗೆ ವರದಿಯಾಗಿದೆ.
ಈರಣ್ಣ ಅಲಿಯಾಸ್ ರಾಜಣ್ಣ ಬಂಧಿತ ಆರೋಪಿ. ಕೇವಲ ಉತ್ತರ ಕರ್ನಾಟಕದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈರಣ್ಣ ನಾನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ. ಬಳಿಕ ಎಂ.ಎಸ್. ಬಿಲ್ಡಿಂಗ್ ಬಳಿಯಲ್ಲಿರೋ ಪಾರ್ಕ್ಗೆ ಕರೆದೊಯ್ದು ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಆಸೆ ತೋರಿಸುತ್ತಿದ್ದ. ಅಭ್ಯರ್ಥಿಗಳಿಗೆ ಫೇಕ್ ಮಾರ್ಕ್ಸ್ಕಾರ್ಡ್ ಮಾಡಿ ಕೊಟ್ಟು ವಿಲೇಜ್ ಅಕೌಂಟೆಂಟ್ ಹುದ್ದೆಗೆ ಅರ್ಜಿಗೆ ಹಾಕಿಸುತ್ತಿದ್ದ ಎನ್ನಲಾಗಿದೆ.
ಈ ಎಲ್ಲಾ ವಿಚಾರಗಳ ಮಧ್ಯೆ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ಬಳಿಕ ಕೆಲಸ ಕೊಡಿಸದೆ ವಂಚಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ನಡೆಸಿದ ವಿಧಾನಸೌಧ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉತ್ತರ ಪ್ರದೇಶ: ತಮ್ಮದೇ ಕ್ಷೇತ್ರದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು
ಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವಕನ ಪತ್ತೆಗೆ ಪಿಎಲ್ಎ ನೆರವು ಕೋರಿದ ಭಾರತೀಯ ಸೇನೆ
ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜ್ ಮತ್ತೊಮ್ಮೆ ಅರೆಸ್ಟ್!
ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥ
ವೈದ್ಯಕೀಯ ಕೋರ್ಸ್: ಒಬಿಸಿಗಳಿಗೆ ಶೇ. 27, ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಗೆ ಸುಪ್ರೀಂಕೋರ್ಟ್ ಅನುಮತಿ