ಕೆಲಸ ಮುಗಿಸಿ ತೆರಳುತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳ ತಂಡದಿಂದ ಚೂರಿ ಇರಿತ! - Mahanayaka
7:08 AM Wednesday 11 - December 2024

ಕೆಲಸ ಮುಗಿಸಿ ತೆರಳುತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳ ತಂಡದಿಂದ ಚೂರಿ ಇರಿತ!

mangalore crime news
14/10/2021

ಮಂಗಳೂರು:  ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವರಿಗೆ ಚೂರಿಯಿಂದ ಬೆನ್ನಿಗೆ ಇರಿದು ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಾಲೆಮಾರ್ ಎಂಬಲ್ಲಿ ನಡೆದಿದ್ದು,  ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಚೂರಿಯಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.

ಇಲ್ಲಿನ ಪಂಜಿಮೊಗರು ನಿವಾಸಿ 45 ವರ್ಷ ವಯಸ್ಸಿನ ರಾಜೇಶ್ ಗಾಯಗೊಂಡವರಾಗಿದ್ದು, ಕೆಲಸ ಮುಗಿಸಿ ಕೊಟ್ಟಾರದಿಂದ ಹೋಗುತ್ತಿದ್ದಾಗ ಪಾಲೆಮಾರ್ ಬಳಿಯಲ್ಲಿ ದುಷ್ಕರ್ಮಿಗಳ ತಂಡ ಬೆನ್ನಿಗೆ ಇರಿದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಗಾಯಗೊಂಡ ರಾಜೇಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಘಟನೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಹಬ್ಬದ ದಿನವೇ ಘೋರ ಕೃತ್ಯ: ಸಾಂಬರ್ ಚೆನ್ನಾಗಿಲ್ಲ ಎಂದು ತಾಯಿ, ತಂಗಿಯನ್ನು ಗುಂಡು ಹಾರಿಸಿಕೊಂಡ ಪಾಪಿ!

ಅದೇ ವಿಡಿಯೋದಲ್ಲಿ ಬಿ.ವೈ.ವಿಜಯೇಂದ್ರ ಬಗ್ಗೆಯೂ ಮಾತನಾಡಿದ್ರಂತೆ ಸಲೀಂ | ವಿಡಿಯೋ ಕಟ್ ಮಾಡಿ ತೋರಿಸಲಾಗಿದೆ ಎಂಬ ಆರೋಪ

ಕೋಟಿಗೊಬ್ಬ-3: ಬಿಡುಗಡೆ ದಿನವೇ ಸುದೀಪ್ ಅಭಿಮಾನಿಗಳಿಗೆ ಭಾರೀ ನಿರಾಸೆ

12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಅರೆಸ್ಟ್

ಕಂತ್ರಿ ನಾಯಿಗಳು ನೀವು, ಹೊಟ್ಟೆಗೆ ಏನ್ ತಿಂತೀರಾ? | ಉಗ್ರಪ್ಪಗೆ ಉಗ್ರರೂಪ ತೋರಿಸಿದ ಕಾಂಗ್ರೆಸ್ ಕಾರ್ಯಕರ್ತೆ

ದಸರ ಮುಗಿದ ತಕ್ಷಣ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ: ಶಿಕ್ಷಕರಿಗೆ ಸರ್ಕಾರ ನೀಡಿದ ಆದೇಶ ಏನು?

ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂದವರಿಗೆ ಅವರದ್ದೇ ಪಕ್ಷದವರು ಸಾಕ್ಷ್ಯ ನೀಡಿದ್ದಾರೆ | ನಳಿನ್ ಕುಮಾರ್ ಕಟೀಲ್

ಇತ್ತೀಚಿನ ಸುದ್ದಿ