ಕೇಳಿದ ಖಾತೆ ಸಿಗಲಿಲ್ಲ ಎಂದಾದರೆ, ರಾಜೀನಾಮೆ ನೀಡಬೇಕಾಗುತ್ತದೆ | ಆನಂದ್ ಸಿಂಗ್
ಬಳ್ಳಾರಿ: ಎಲ್ಲ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನವಾದರೆ, ಸಚಿವ ಸ್ಥಾನಕ್ಕೆ ಆಯ್ಕೆಯಾಗಿರುವ ಆನಂದ್ ಸಿಂಗ್ ಗೆ ಒಳ್ಳೆಯ ಖಾತೆ ಸಿಕ್ಕಿಲ್ಲ ಎನ್ನುವ ಅಸಮಾಧಾನ. ತಾನು ನಿರೀಕ್ಷಿಸಿದ ಖಾತೆ ಸಿಕ್ಕಿಲ್ಲ, ಖಾತೆ ಬದಲಿಸದಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಆಲೋಚಿಸಬೇಕಾಗುತ್ತದೆ ಎಂದು ಆನಂದ್ ಸಿಂಗ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಯಾವ ಖಾತೆ ಬೇಕೆಂದು ಕೇಳಿದ್ದೆ. ನನ್ನ ಮನವಿ ಪರಿಗಣಿಸುವುದಾಗಿ ಹೇಳಿದ್ದರು. ಆದರೆ, ಈಗ ಬೇರೆ ಖಾತೆ ಕೊಡಲಾಗಿದೆ. ಇದರಿಂದ ನನಗೆ ಅಸಮಾಧಾನವಾಗಿರುವುದು ನಿಜ ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಕೇಳಿದ ಖಾತೆ ಸಿಗುತ್ತದೆ ಎಂದು ಉತ್ಸಾಹದಲ್ಲಿದ್ದೆ. ಆದರೆ ಅದು ಹಾಗೆ ಆಗಲಿಲ್ಲ. ಇನ್ನೊಮ್ಮೆ ಯಡಿಯೂರಪ್ಪ ಹಾಗೂ ಸಿಎಂ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ. ಖಾತೆ ಬದಲಿಸದಿದ್ದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಮುಂದುವರಿಯುವ ಬಗ್ಗೆ ಚಿಂತಿಸಲಾಗುವುದು ಎಂದು ಅವರು ಹೇಳಿದರು.
ಆನಂದ್ ಸಿಂಗ್ ಯಾವ ಲಾಭದಾಯಕ ಖಾತೆಯ ನಿರೀಕ್ಷೆಯಲ್ಲಿದ್ದರು ಎನ್ನುವುದು ತಿಳಿದು ಬಂದಿಲ್ಲ. ಆದರೆ ಸದ್ಯ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ನೀಡಲಾಗಿದೆ. ಈ ಖಾತೆಯನ್ನು ಹಿಡಿದುಕೊಂಡು ತಾನೇನು ಮಾಡುವುದು ಎನ್ನುವ ಭಾವನೆಯಲ್ಲಿ ಇದೀಗ ಆನಂದ್ ಸಿಂಗ್ ಇದ್ದಾರೆ. ಆನಂದ್ ಸಿಂಗ್ ಕೇಳಿದ ಲಾಭದಾಯಕ ಖಾತೆ ಯಾವುದು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಇನ್ನಷ್ಟು ಸುದ್ದಿಗಳು…
ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ಹಂಚಿಕೆ ಮಾಡಲಾಗಿದೆ?
ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಮದ್ಯವ್ಯಸನಿ ತಂದೆ!
ಮತ್ತೆ ಕೃಷ್ಣನ ತಂತ್ರಗಾರಿಗೆ ತೋರುತ್ತಾರಾ ರಮೇಶ್ ಜಾರಕಿಹೊಳಿ?
ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್