'ಕೃಷಿ' ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ ಕೇಂದ್ರ ಸರ್ಕಾರ ಯಾಕೆ ಕಾನೂನು ರೂಪಿಸುತ್ತಿದೆ? | ದೇವನೂರು ಮಹಾದೇವ ಪ್ರಶ್ನೆ - Mahanayaka
10:19 AM Wednesday 15 - January 2025

‘ಕೃಷಿ’ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ ಕೇಂದ್ರ ಸರ್ಕಾರ ಯಾಕೆ ಕಾನೂನು ರೂಪಿಸುತ್ತಿದೆ? | ದೇವನೂರು ಮಹಾದೇವ ಪ್ರಶ್ನೆ

08/12/2020

ಮೈಸೂರು: ಕೃಷಿ ವಲಯವು ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಆದರೆ ಕೇಂದ್ರ ಸರ್ಕಾರವು ಕೃಷಿಗೆ ನೂತನ ಕಾನೂನು ಜಾರಿಗೊಳಿಸುವ ಮೂಲಕ ರಾಜ್ಯಗಳ ಸೂತ್ರ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು.

 


ADS

ಕೇಂದ್ರ ಕೃಷಿ ಕಾನೂನಿನ ವಿರುದ್ಧ ಹಮ್ಮಿಕೊಂಡಿರುವ ಭಾರತ್ ಬಂದ್ ಗೆ ಬೆಂಬಲ ನೀಡಿ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿ ರಾಜ್ಯ ವ್ಯಾಪ್ತಿಯಲ್ಲ ಬರುತ್ತದೆ. ಆದರೂ ಕೇಂದ್ರ ಸರ್ಕಾರ ಯಾಕೆ ಕೃಷಿ ಕಾನೂನನ್ನು ತರುತ್ತಿದೆ ಎಂದು ಅವರು ಪ್ರಶ್ನಿಸಿದರು.

 

ಕೇಂದ್ರ ಸರ್ಕಾರವನ್ನು ಯಾವುದೇ ರಾಜ್ಯಗಳು ಪ್ರಶ್ನಿಸುತ್ತಿಲ್ಲ. ರಾಜ್ಯಗಳು ನರ ಸತ್ತಂತಿವೆ. ಅವುಗಳು ಕೇಂದ್ರ ಸರ್ಕಾರದ ಭಯದಲ್ಲಿವೆ. ಇಡೀ ದೇಶದಲ್ಲಿ ಇದೀಗ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ದೇವನೂರು ಟೀಕಿಸಿದರು.

 

ಕೃಷಿ ವಲಯವು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ ರಾಜ್ಯಗಳನ್ನು ಕೇಂದ್ರ ಸರ್ಕಾರ (ಒಕ್ಕೂಟ ಸರ್ಕಾರ) ಗಣನೆಗೆ  ತೆಗೆದುಕೊಳ್ಳದೆ  ಸಂವಿಧಾನವನ್ನು ಮೀರಿ ನಡೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.

 ಪ್ರತಿಭಟನೆಗೆ ಬರುವವರನ್ನು ದೇಶದ್ರೋಹಿಗಳು, ಖಲಿಸ್ತಾನಿಗಳು ಎನ್ನುತ್ತಿದ್ದಾರೆ. ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ, ದಯವಿಟ್ಟು ಮನುಷ್ಯರಾಗಿ ನಿಮ್ಮ ಗುಣಗಳನ್ನು ಬದಲಾಯಿಸಿಕೊಳ್ಳಿ ಎಂದು ದೇವನೂರು ಹೇಳಿದರು.

ಇತ್ತೀಚಿನ ಸುದ್ದಿ