ಅಮೆರಿಕದಿಂದ ಲಂಚದ ಆರೋಪ ಹಿನ್ನೆಲೆ: ಅದಾನಿ ಗ್ರೂಪ್ ವಿದ್ಯುತ್ ಒಪ್ಪಂದವನ್ನು ರದ್ದುಗೊಳಿಸಿದ ಕೀನ್ಯಾ; ಮೋದಿ ಆಪ್ತನಿಗೆ ಹಿನ್ನಡೆ
ಕೀನ್ಯಾ ಅಧ್ಯಕ್ಷ ವಿಲಿಯನ್ ರುಟೊ ಅವರು ಅದಾನಿ ಗ್ರೂಪ್ ಒಳಗೊಂಡ ಪ್ರಮುಖ ಯೋಜನೆಗಳ ಬಗ್ಗೆ ಕಠುವಾದ ನಿಲುವನ್ನು ತೆಗೆದುಕೊಂಡಿದ್ದಾರೆ. ಅದಾನಿ ಗ್ರೂಪ್ ನ ಪ್ರಸ್ತಾಪವನ್ನು ಒಳಗೊಂಡ ಕೀನ್ಯಾದ ಮುಖ್ಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಅವರು ಗುರುವಾರ ಘೋಷಿಸಿದ್ದಾರೆ.
ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಿಸಲು ಅದಾನಿ ಗ್ರೂಪ್ ಘಟಕದೊಂದಿಗೆ 736 ಮಿಲಿಯನ್ ಡಾಲರ್, 30 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಒಪ್ಪಂದವನ್ನು ರದ್ದುಪಡಿಸಲಾಗಿದೆ ಎಂದು ರುಟೊ ಬಹಿರಂಗಪಡಿಸಿದ್ದಾರೆ.
ಇಂತಹ ಒಪ್ಪಂದಗಳ ಮೇಲೆ ಈ ಪ್ರಕರಣ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ರಾಯಿಟರ್ಸ್ ಗುರುವಾರ ವರದಿ ಮಾಡಿದೆ.
ಕೀನ್ಯಾದ ಅಧ್ಯಕ್ಷ ವಿಲಿಯಂ ರುಟೊ ಅವರು ತಮ್ಮ ಭಾಷಣದಲ್ಲಿ, “ತನಿಖಾ ಸಂಸ್ಥೆಗಳು ಮತ್ತು ಪಾಲುದಾರ ರಾಷ್ಟ್ರಗಳು ಒದಗಿಸಿದ ಹೊಸ ಮಾಹಿತಿಯನ್ನು ಉಲ್ಲೇಖಿಸಿ ನಡೆಯುತ್ತಿರುವ ಖರೀದಿಯನ್ನು ತಕ್ಷಣ ರದ್ದುಗೊಳಿಸುವಂತೆ ನಾನು ಸಾರಿಗೆ ಸಚಿವಾಲಯ ಮತ್ತು ಇಂಧನ ಮತ್ತು ಪೆಟ್ರೋಲಿಯಂ ಸಚಿವಾಲಯದೊಳಗಿನ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದೇನೆ” ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj