ಜೀವಂತ ಸಮಾಧಿಯಾದ್ರೆ ಸ್ವರ್ಗ ಸಿಗುತ್ತದೆ, ಏಸುವನ್ನು ನೋಡಬಹುದು ಎಂದ ಪಾದ್ರಿ: ಮಕ್ಕಳು ಸೇರಿದಂತೆ 110 ಜನ ಜೀವಂತ ಸಮಾಧಿ
ಉಪವಾಸ ಕುಳಿತು ಜೀವಂತ ಸಮಾಧಿಯಾದರೆ ಸ್ವರ್ಗ ಸಿಗುತ್ತದೆ, ಏಸುವನ್ನು ನೋಡಬಹುದು ಎಂಬ ಪಾದ್ರಿಯೊಬ್ಬರ ಮಾತನ್ನು ಅನುಸರಿಸಿದ ಮಕ್ಕಳು ಸೇರಿದಂತೆ ಸುಮಾರು 110 ಜನರು ಜೀವಂತ ಸಮಾಧಿಯಾದ ಘಟನೆ ಕೀನ್ಯಾದ ಕರಾವಳಿ ಪಟ್ಟಣದ ಮಲಿಂಡಿ ಬಳಿ ನಡೆದಿದೆ.
ಈಗಾಗಲೇ ಪೊಲೀಸರು 110 ಮತದೇಹಗಳನ್ನು ಸಮಾಧಿಯಿಂದ ಹೊರ ತೆಗೆದಿದ್ದಾರೆ. ಈಗಾಗಲೇ ನಡೆಸಲಾಗಿರುವ ಕಾರ್ಯಾಚರಣೆಯಲ್ಲಿ ಐವರು ಜೀವಂತವಾಗಿ ಪತ್ತೆಯಾಗಿದ್ದಾರೆ.
ಪೊಲೀಸರು ಜನರ ಪ್ರಾಣ ಉಳಿಸಲು ಸಮಾಧಿಯನ್ನು ಅಗೆಯುತ್ತಲೇ ಇದ್ದಾರೆ. ಆದರೆ ಸಮಾಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳೇ ಪತ್ತೆಯಾಗುತ್ತಿವೆ. ಮೃತ ದೇಹಗಳ ಪೈಕಿ ಮಕ್ಕಳು ಕೂಡ ಇದ್ದಾರೆ ಎನ್ನುವುದು ಹೃದಯ ವಿದ್ರಾವಕವಾಗಿದೆ.
ಯಾರಾದರೂ ಜೀವಂತವಾಗಿರುವವರು ಇರಬಹುದೇ ಎನ್ನುವ ನಿಟ್ಟಿನಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಲೇ ಇದ್ದಾರೆ. ಘಟನೆಗೆ ಕಾರಣವಾದ ಪಾದ್ರಿ ಪಾಲ್ ಮೆಕೆಂಜಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತಾನು ಆತ್ಮಹತ್ಯೆಗೆ ಯಾರನ್ನೂ ಪ್ರೇರೇಪಿಸಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw