ಎರಡನೇ ಬಾರಿಗೆ ಕೇರಳ ಸಿಎಂ ಆಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ ಸ್ವೀಕಾರ - Mahanayaka
4:15 AM Wednesday 11 - December 2024

ಎರಡನೇ ಬಾರಿಗೆ ಕೇರಳ ಸಿಎಂ ಆಗಿ ಪಿಣರಾಯಿ ವಿಜಯನ್ ಪ್ರಮಾಣ ವಚನ ಸ್ವೀಕಾರ

pinarayi vijayan
20/05/2021

ತಿರುವನಂತಪುರಂ:  ಕೇರಳ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಎರಡನೇ ಬಾರಿಗೆ  ಪ್ರಮಾಣ ವಚನ ಸ್ವೀಕರಿಸಿದರು.  ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಸರಳ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಎಪ್ರಿಲ್-ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್ ಡಿಎಫ್ 140 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆದ್ದುಕೊಂಡು ಬಹುಮತ ಸಾಧಿಸಿತ್ತು. ಇಂದು ಮಧ್ಯಾಹ್ನ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು 76 ವರ್ಷದ ಪಿಣರಾಯಿ ವಿಜಯನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್-ಯೂಡಿಎಫ್ ನಾಯಕರು ಸಮಾರಂಭದಿಂದ ದೂರ ಉಳಿದಿದ್ದರು. ಸಮಾರಂಭದಲ್ಲಿ ಭಾಗವಹಿಸುತ್ತಿರುವ ಜನರ ಸಂಖ್ಯೆಯನ್ನು ಕಡಿಮೆ ಮಾಡುವಂತೆ  ಕೇರಳ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಇತ್ತೀಚಿನ ಸುದ್ದಿ