ಪತ್ನಿ ಹೆರಿಗೆ ಕೊಠಡಿಯಲ್ಲಿ, ಪತಿ ಬಾರ್ ನಲ್ಲಿ, ಮಗ ರಸ್ತೆಯಲ್ಲಿ | ಮನಕಲಕುವ ಘಟನೆ
ಆಲಪ್ಪುಳ: ಮದ್ಯ ಸೇವನೆಯಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿದ್ದರೂ ಸರ್ಕಾರಗಳು ಮದ್ಯ ಮಾರಾಟ ನಿಷೇಧಿಸಲು ಮುಂದಾಗುತ್ತಿಲ್ಲ. ಶ್ರೀಮಂತರ ಮಕ್ಕಳು ಡ್ರಗ್ಸ್ ಸೇವನೆ ಮಾಡಿ ಹಾಳಾಗುತ್ತಿದ್ದಾರೆ ಎಂದು ಡ್ರಗ್ಸ್ ನಿಷೇಧ ಮಾಡಲಾಗಿದೆ. ಆದರೆ ಬಡವರು ಮದ್ಯ ಸೇವನೆ ಮಾಡಿ ಹಾಳಾಗುತ್ತಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲದ ಸರ್ಕಾರಗಳು ಬಡ ಮನೆಯ ಹೆಣ್ಣು ಮಕ್ಕಳ ಕಣ್ಣೀರಿನ ಹಣವನ್ನು ತನ್ನ ಬೊಕ್ಕಸಕ್ಕೆ ತುಂಬುತ್ತಿದೆ.
ಇಷ್ಟೆಲ್ಲ ಪೀಠಿಕೆ ಯಾಕೆ ಹಾಕಬೇಕಾಯ್ತು ಗೊತ್ತಾ?, ಕೇರಳದಲ್ಲೊಬ್ಬ ತನ್ನ ಪತ್ನಿಯನ್ನು ಹೆರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಬಾರ್ ಗೆ ತೆರಳಿದ್ದಾನೆ. ಮಗನನ್ನು ಬಾರ್ ನಲ್ಲಿಯೇ ಬಿಟ್ಟು ಸ್ಥಳದಿಂದ ತೆರಳಿದ ಘಟನೆ ನಡೆದಿದೆ.
ಈ ಪತಿಮಹಾಶಯ ಮೂಲತಃ ಅಸ್ಸಾಂನವನಾಗಿದ್ದು, ಹೆರಿಗೆಗೆಂದು ಕೇರಳದ ಚೆಂಗನ್ನೂರು ಜಿಲ್ಲಾಸ್ಪತ್ರೆಗೆ ಪತ್ನಿಯನ್ನು ಕರೆತಂದಿದ್ದ. ಜೊತೆಗೆ ಅಪ್ರಾಪ್ತ ವಯಸ್ಸಿನ ತನ್ನ ಮಗನನ್ನೂ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಪತ್ನಿಯ ಬಳಿ ಈಗ ಬರುತ್ತೇನೆ ಎಂದು ಮಗನನ್ನು ಕರೆದುಕೊಂಡು ಬಾರ್ ಗೆ ಮದ್ಯಪಾನ ಮಾಡಲು ಹೊರಟಿದ್ದಾನೆ. ಬಾರ್ ನಿಂದ ಹೊರಡುವ ವೇಳೆ ಮಗನನ್ನು, ಪತ್ನಿಯನ್ನು ಮರೆತು ಸ್ಥಳದಿಂದ ತೆರಳಿದ್ದಾನೆ.
ಇತ್ತ ಮಗ ಮತ್ತು ಪತಿಯ ಬರುವಿಕೆಗಾಗಿ ಗರ್ಭಿಣಿ ಹೆರಿಗೆ ಕೊಠಡಿಯಲ್ಲಿ ಕಾದು ಸುಸ್ತಾಗಿದ್ದು, ಗಂಟೆಗಟ್ಟಲೆ ಕಾದರೂ ಅವರು ಬಾರದಿದ್ದಾಗ ದಿಕ್ಕು ತೋಚದೇ ಆಸ್ಪತ್ರೆ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಮಹಿಳೆಯ ಸ್ಥಿತಿ ನೋಡಿ ಮರುಗಿದ್ದು, ಡಿವೈಎಸ್ಪಿ ಡಾ. ಆರ್.ಜೋಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಪೊಲೀಸರು ಮಗು ಹಾಗೂ ತಂದೆಯನ್ನು ಹುಡುಕಾಡಿದ್ದಾರೆ. ಈ ವೇಳೆ ನಗರದ ಮಾರುಕಟ್ಟೆಯೊಂದರಲ್ಲಿ ಮಗು ತಂದೆಯನ್ನು ಹುಡುಕಾಡುತ್ತಾ, ಅಳುತ್ತಾ ಅಲೆದಾಡುತ್ತಿರುವ ದೃಶ್ಯ ಕಂಡು ಬಂದಿದೆ. ತಕ್ಷಣವೇ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಮಗು ಸುಮಾರು ಒಂದೂವರೆ ಗಂಟೆಗಳಿಂದ ತನ್ನ ತಂದೆಯನ್ನು ಹುಡುಕಾಡುತ್ತಾ ರಸ್ತೆಯಲ್ಲಿ ಅಲೆದಾಡಿದ್ದ.
ಮದ್ಯಪಾನದಿಂದ ಎಷ್ಟೋ ಕುಟುಂಬಗಳು ಬೀದಿಗೆ ಬರುತ್ತಿವೆ. ಇಂತಹ ಸಾವಿರ ಘಟನೆಗಳು ನಡೆದರೂ ಆಳುವ ಸರ್ಕಾರಗಳಿಗೆ ಇದೊಂದು ಸಮಸ್ಯೆ ಎಂದು ಅನ್ನಿಸುವುದಿಲ್ಲ. ಕಂಡ ಕಂಡ ಆಚರಣೆಗಳನ್ನು ನಿಷೇಧಿಸಲು ತೋರಿಸುವ ಉತ್ಸಾಹ, ಮದ್ಯ ನಿಷೇಧ ಮಾಡಲು ತೋರಿಸಿದ್ದರೆ. ಈ ದೇಶದ ಹೆಣ್ಣು ಮಕ್ಕಳ ಜೀವನದಲ್ಲಿ ನಿಜವಾದ ಬೆಳಕು ಮೂಡುತ್ತಿತ್ತು. ಕುಡಿತದ ಚಟಕ್ಕೆ ಬಿದ್ದ ಪುರುಷರ ಕೈಯಲ್ಲಿ ಎಷ್ಟೋ ಬಡ ಮಹಿಳೆಯರ ಸುಂದರ ಜೀವನ ಸುಟ್ಟು ಭಸ್ಮವಾಗಿದೆ. ಹಾಗಾಗಿ ಮದ್ಯ ನಿಷೇಧಕ್ಕೆ ಭಾರತದ ಎಲ್ಲಾ ರಾಜ್ಯಗಳು ಮುಂದಾಗಬೇಕಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಸೈಕಲ್ ಕೊಡಿಸು ಎಂದು ಹಠ ಹಿಡಿದದ್ದಕ್ಕೆ ಮಗಳ ಮೇಲೆ ಕುದಿಯುವ ನೀರು ಎರಚಿದ ಪಾಪಿ!
ಕೆಲಸ ಕೊಡಿಸುವ ನೆಪದಲ್ಲಿ ಕರೆದೊಯ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಕಾರ್ಖಾನೆಯಲ್ಲಿ ಸ್ಫೋಟ: 6 ಮಂದಿಯ ದಾರುಣ ಸಾವು
ರೋಪ್ ವೇ ಕೇಬಲ್ ಕಾರುಗಳ ಡಿಕ್ಕಿ: ರೋಪ್ ವೇಯಲ್ಲಿ ಸಿಲುಕಿದ 50ಕ್ಕೂ ಅಧಿಕ ಜನ