ಕೇರಳದ ಲಾಟರಿಯಲ್ಲಿ 1 ಕೋಟಿ ಬಹುಮಾನ  ಪಡೆದ ಮಂಡ್ಯದ ಯುವಕ

09/02/2021

ಮಂಡ್ಯ: ಕೇರಳದ ಲಾಟರಿ ಟಿಕೆಟ್ ಮೂಲಕ ಮಂಡ್ಯದ  ಯುವಕನೋರ್ವ  1 ಕೋಟಿ ರೂಪಾಯಿ ಗೆದ್ದಿದ್ದು, ಸ್ನೇಹಿತರ ಒತ್ತಾಯದ ಮೇರೆಗೆ ಲಾಟರಿ ತೆಗೆದುಕೊಂಡಿದ್ದರು. ನಿರೀಕ್ಷೆಯೇ ಮಾಡದೇ ಅವರಿಗೆ ಲಾಟರಿಯಲ್ಲಿ 1 ಕೋಟಿ ರೂ. ಸಿಕ್ಕಿದೆ.

ಕುಟುಂಬದ ಸ್ನೇಹಿತರ ಜೊತೆಗೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಯುವಕ, ತೆರಳಿದ್ದು, ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಸ್ನೇಹಿತರು ಬಹಳ ಒತ್ತಾಯ ಮಾಡಿದರು ಎಂದು 100 ರೂ. ಕೊಟ್ಟು ಟಿಕೆಟ್ ಖರೀದಿಸಿದ್ದರು. ಈ ಲಾಟರಿ ನಂಬರ್ ಗೆ ಬಹುಮಾನ ಬಂದಿದೆ.

ಲಾಟರಿ ಗೆದ್ದ ಯುವಕ ಸೋಮನಹಳ್ಳಿಯ ಉದ್ಯಮಿಯ ಪುತ್ರ ಸೋಹನ್ ಬಲರಾಮ್ ಆಗಿದ್ದಾರೆ.  ಕೇರಳದ ಭಾಗ್ಯಧರ ಲಾಟರಿಯನ್ನು ಅವರು ಖರೀದಿಸಿದ್ದರು. ಕೇರಳದ ಲಾಟರಿ ಇತ್ತೀಚೆಗೆ ಬಹಳಷ್ಟು ಸುದ್ದಿಯಾಗುತ್ತಿದೆ. ಇತ್ತೀಚೆಗಷ್ಟೆ ಭಾರತ ಮೂಲದ ವ್ಯಕ್ತಿಯೊಬ್ಬರು ದುಬೈನಲ್ಲಿ ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಿ 7 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆದಿದ್ದರು.

ಇತ್ತೀಚಿನ ಸುದ್ದಿ

Exit mobile version