ರಿಯಾದ್ ಜೈಲಲ್ಲಿ ಕೇರಳದ ವ್ಯಕ್ತಿ: 47 ಕೋಟಿಗಿಂತಲೂ ಹೆಚ್ಚಿನ ಹಣ ಸಂಗ್ರಹ ಎಂದ ಕಾನೂನು ನೆರವು ಸಮಿತಿ
ರಿಯಾದ್ ಜೈಲಿನಲ್ಲಿರುವ ಕೋಝಿಕ್ಕೋಡ್ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗಾಗಿ 47,87,65,347 ಕೋಟಿ ರೂಪಾಯಿ ಸಂಗ್ರಹಿಸಿರುವುದಾಗಿ ರಹೀಮ್ ಕಾನೂನು ನೆರವು ಸಮಿತಿ ಕೋಝಿಕ್ಕೋಡ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದೆ.
36 ಕೋಟಿ 27 ಲಕ್ಷದ 34 ಸಾವಿರದ ಒಂಬೈನೂರ ಇಪ್ಪತ್ತೇಳು ರೂಪಾಯಿ ಖರ್ಚು ಮಾಡಿದ್ದು, ಉಳಿದ 11,60,30,420 ಟ್ರಸ್ಟ್ ನ ಬ್ಯಾಂಕ್ ಖಾತೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಹೀಮ್ ದೇಶಕ್ಕೆ ಬಂದ ತಕ್ಷಣ ಆ ಮೊತ್ತವನ್ನು ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಕಾನೂನು ನೆರವು ಸಮಿತಿ ಹೇಳಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಕೆಲವು ನಿರಂತರ ತಪ್ಪು ಮಾಹಿತಿ ಮತ್ತು ಅಪಪ್ರಚಾರಗಳ ಜೊತೆಯಲ್ಲಿ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ರಿಯಾದ್‌ನ ನ್ಯಾಯಾಲಯವು ನವೆಂಬರ್ 17 ರಂದು ರಹೀಮ್ ಪ್ರಕರಣದ ವಿಚಾರಣೆ ನಡೆಸಲಿದೆ. ಅಪ್ರತಿಮ ಮಿಷನ್ ಸಾಧಿಸಲಾಗಿದೆ. ನಿಜವಾದ ಕೇರಳದ ಕಥೆಯಾಗಿ ಮೂಡಿಬಂದ ನಿಧಿ ಸಂಗ್ರಹಕ್ಕೆ ವಿಶ್ವವೇ ಸಹಕರಿಸಿರುವುದು ಕೇರಳದ ಇತಿಹಾಸದಲ್ಲಿ ಸುವರ್ಣ ದಾಖಲೆಯಾಗಿ ಉಳಿಯಲಿದೆ ಎಂದು ಪದಾಧಿಕಾರಿಗಳು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj