ಇಸ್ರೇಲ್ ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನ: ಗುಂಡೇಟಿನಿಂದ ಕೇರಳದ ವ್ಯಕ್ತಿ ಸಾವು

ಇಸ್ರೇಲ್ ಗೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿ ಜೋರ್ಡನ್ ಗಡಿಯಲ್ಲಿ ಕೇರಳದ ವ್ಯಕ್ತಿ ಓರ್ವ ಗುಂಡೇಟು ತಿಂದು ಸಾವಿಗೀಡಾಗಿರುವ ಮತ್ತು ಇನ್ನೋರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇಸ್ರೇಲ್ ನಲ್ಲಿ ತಿಂಗಳಿಗೆ ಮೂರೂವರೆ ಲಕ್ಷ ರೂಪಾಯಿ ಸಂಬಳ ಸಿಗುತ್ತೆ ಎಂದು ಕೇರಳದ ವ್ಯಕ್ತಿ ಒಬ್ಬರು ಹೇಳಿದ ಹಿನ್ನೆಲೆಯಲ್ಲಿ ಅವರು ಹೀಗೆ ಅಕ್ರಮವಾಗಿ ಇಸ್ರೇಲ್ ಪ್ರವೇಶಿಸಲು ಮುಂದಾಗಿದ್ದರು.
42 ವರ್ಷದ ಥಾಮಸ್ ಅವರಿಗೆ ತಲೆಗೆ ಗುಂಡೇಟು ಬಿದ್ದು ಸಾವಿಗೀಡಾಗಿದ್ದರೆ ಅವರ ಜೊತೆಗಿದ್ದ 43 ವರ್ಷದ ಎಡಿಸನ್ ಗಾಯಗೊಂಡಿದ್ದಾರೆ. ಫೆಬ್ರವರಿ ಹತ್ತರಂದು ಈ ಘಟನೆ ನಡೆದಿದೆ. ಇದಕ್ಕಿಂತ ಮೊದಲು ಇವರು ಜೋರ್ಡನಿಗೆ ಹೋಗಿದ್ದರು. ಫೆಬ್ರವರಿ 28ರಂದು ಎಡಿಸನ್ ಮರಳಿ ಕೇರಳಕ್ಕೆ ಬಂದಿದ್ದಾರೆ. ಈ ತೋಮಸ್ ಮತ್ತು ಎಡಿಸನ್ ಇಬ್ಬರೂ ಕೂಡ ಕೇರಳದ ತಿರುವನಂತಪುರದವರು.
ಏಪ್ರಿಲ್ ನಲ್ಲಿ ಇವರು ಟೂರಿಸ್ಟ್ ವೀಸಾದಲ್ಲಿ ಜೋರ್ಡನ್ ಗೆ ಹೋಗಿದ್ದರು.. ಇವರದೇ ನಾಡಿನ ಬಿಜು ಮತ್ತು ಜೋಶಿ ಎಂಬವರು ಕೂಡ ಇವರ ಜೊತೆಗಿದ್ದರು. ಜೋಶಿ ಅವರು ಇಂಗ್ಲೆಂಡ್ ನಲ್ಲಿ ವೃತ್ತಿ ಮಾಡಿದ ಅನುಭವಿಯಾಗಿದ್ದು ಫೆಬ್ರವರಿ 9ರಂದು ಕೇರಳಕ್ಕೆ ಮರಳಿದ್ದಾರೆ. ಬಿಜು ಅವರು ಇಸ್ರೇಲ್ ಪ್ರವೇಶಿಸುವಂತೆ ಇವರಿಗೆ ಪ್ರಚೋದನೆ ನೀಡಿದರು ಎಂದು ತಿಳಿದುಬಂದಿದೆ ಈ ಬಿಜು ಅವರು ಜೋರ್ಡಾನ್ನಲ್ಲಿ ಕೆಲಸ ಮಾಡುತ್ತಿದ್ದರು. ಬಿಜುಗೆ ಇವರಿಬ್ಬರೂ ತಲಾ ಎರಡು ಲಕ್ಷದ 10 ಸಾವಿರ ರೂಪಾಯಿ ಕೊಟ್ಟಿದ್ದಾರೆ.
ಶ್ರೀಲಂಕಾದ ವ್ಯಕ್ತಿ ಫೆಬ್ರವರಿ ಹತ್ತರಂದು ಇವರನ್ನು ಇಸ್ರೇಲ್ ಗಡಿಗೆ ಕರಕೊಂಡು ಹೋಗಿದ್ದಾರೆ, ರಾತ್ರಿ 10 ಗಂಟೆಗೆ ಕಡಲ ಕಿನಾರೆಯಲ್ಲಿ ನಡೆದು ಹೋಗುತ್ತಿದ್ದಾಗ ಜೋರ್ಡಾನ್ ಸೆಕ್ಯೂರಿಟಿ ಗಾರ್ಡ್ ಇವರಿಗೆ ಎಚ್ಚರಿಕೆ ನೀಡಿದೆ ಮತ್ತು ಗುಂಡು ಹಾರಿಸಿದೆ. ಎಡಿಸನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲು ಪಾಲಾಗಿದ್ದು ಆ ಬಳಿಕ ತನ್ನ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮತ್ತು ಇದೀಗ ಅವರು ಕೇರಳಕ್ಕೆ ಮರಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj