ಇವರಾಗಲಿದ್ದಾರೆ ಭಾರತದ ಅತ್ಯಂತ ಕಿರಿಯ ಮೇಯರ್! - Mahanayaka

ಇವರಾಗಲಿದ್ದಾರೆ ಭಾರತದ ಅತ್ಯಂತ ಕಿರಿಯ ಮೇಯರ್!

27/12/2020

ಕೊಚ್ಚಿ: ಕೇರಳದ ಸ್ದಳೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕೇರಳದ  ರಾಜ್ಯಧಾನಿ ತಿರುವನಂತಪುರದಲ್ಲಿ 21 ವರ್ಷದ ಯುವತಿ ಆರ್ಯ ರಾಜೇಂದ್ರನ್ ಮೇಯರ್ ಆಗುವ  ಸಾಧ್ಯತೆಯಿದ್ದು ಇದು ನೇರವೇರಿದರೆ ದೇಶದ ಅತಿ ಕಿರಿಯ ಮೇಯರ್ ಎಂಬ  ಹಿರಿಮೆಗೆ ಪಾತ್ರರಾಗಲಿದ್ದಾರೆ.

ಆರ್ಯ ರಾಜೇಂದ್ರನ್ ತಿರುವನಂತಪುರಂನ  ಆಲ್ ಸೈಂಟ್ ಕಾಲೇಜಿನ ಕಾನೂನು ವಿದ್ಯಾರ್ಥಿನಿಯಾಗಿದ್ದು, ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ ಅತ್ಯಂತ ಕಿರಿಯ ವಯಸ್ಸಿನ ಹಿರಿಯ ಅಭ್ಯರ್ಥಿಯಾಗಿರುವ ಇವರು ಮುಡನ್ ಮುಗಳ್ ವಾರ್ಡ್ ನಿಂದ ಗೆಲುವು ಸಾಧಿಸಿದ್ದಾರೆ.

ತಿರುವನಂತಪುರಂ ಜಿಲ್ಲೆಯ ಸಿಪಿಎಂ ಕಾರ್ಯದರ್ಶಿಯು ಆರ್ಯ ರಾಜೇಂದ್ರನ್ ಗೆ ಮೇಯರ್ ಸ್ದಾನ ನೀಡಲು ನಿರ್ಧರಿಸಿದೆ. ಈ ನಿರ್ಧಾರವನ್ನು ಪಕ್ಷದ ರಾಜ್ಯ ಸಮಿತಿ  ಅಂಗೀಕರಿಸುವ ಸಾಧ್ಯತೆಯಿದ್ದು, ಅಂತಿಮ ಪ್ರಕಟಣೆ ಶೀಘ್ರವೇ ಹೊರ ಬೀಳಲಿದೆ.

ಇತ್ತೀಚಿನ ಸುದ್ದಿ