ಕೇರಳದಲ್ಲಿ ಪಿಣರಾಯಿ ವಿಜಯನ್ ಹೀರೋ, ಬಿಜೆಪಿ ಝೀರೋ | ಪಿಣರಾಯಿ ಮತ್ತೊಮ್ಮೆ ಸಿಎಂ
02/05/2021
ಕೇರಳ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್ ಡಿಎಫ್ ಭರ್ಜರಿ ಬಹುಮತದತ್ತ ಸಾಗಿದ್ದು, ಬಿಜೆಪಿ ಒಂದೇ ಒಂದು ಸ್ಥಾನಗಳಲ್ಲಿ ಕೂಡ ಗೆಲುವು ಸಾಧಿಸಿಲ್ಲ, ಈ ಮೂಲಕ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಮುಖಭಂಗವಾಗಿದೆ.
ಪಿನರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ 96 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಯುಡಿಎಫ್ 44 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಒಂದೇ ಒಂದು ಕ್ಷೇತ್ರದಲ್ಲಿ ಜಯ ಸಾಧಿಸದೇ ಹೀನಾಯ ಸ್ಥಿತಿಯಲ್ಲಿದೆ.
ಕೇರಳ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಮತ್ತೊಮ್ಮೆ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಎಲ್ ಡಿಎಫ್ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ನೀಡಿದ್ದ 140 ಸ್ಥಾನ, “ಅದಕ್ಕೂ ಮೇಲೆ” ಎಂಬ ಸಿನಿಮಾ ಡೈಲಾಗ್ ಇದೀಗ ವೈರಲ್ ಆಗಿದೆ.