ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆ: ಪತಿ ದೋಷಿ ಎಂದು ತೀರ್ಪು ನೀಡಿದ ಕೋರ್ಟ್ - Mahanayaka
12:16 AM Tuesday 4 - February 2025

ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆ: ಪತಿ ದೋಷಿ ಎಂದು ತೀರ್ಪು ನೀಡಿದ ಕೋರ್ಟ್

uthra murder
11/10/2021

ಕೊಲ್ಲಂ: ಪತ್ನಿಗೆ ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿದ್ದ ಪ್ರಕರಣ ಕೇರಳದಲ್ಲಿ ನಡೆದಿತ್ತು. ಈ ಸುದ್ದಿ ದೇಶಾದ್ಯಂತ ಭಾರೀ ಆಕ್ರೋಶವನ್ನು ಸೃಷ್ಟಿಸಿತ್ತು. ಇದೀಗ ಈ ಪ್ರಕರಣದ ವಿಚಾರಣೆಗಳು ಮುಗಿದಿದ್ದು, ಪ್ರಕರಣದಲ್ಲಿ ಪತಿ ದೋಷಿಯಾಗಿದ್ದಾನೆ ಎಂದು ಕೊಲ್ಲಂನ ನ್ಯಾಯಾಲಯ ತೀರ್ಪು ನೀಡಿದೆ.

ಮೇ ತಿಂಗಳಿನಲ್ಲಿ ಉತ್ತರ ಎಂಬ ಮಹಿಳೆ ಮಲಗಿದ್ದ ಕೊಠಡಿಗೆ ಸ್ವತಃ ಪತಿಯೇ ನಾಗರಹಾವು ಬಿಟ್ಟು ಆಕೆಗೆ ಕಚ್ಚುವಂತೆ ಮಾಡಿ ಆಕೆಯ ಸಾವಿಗೆ ಕಾರಣವಾಗಿದ್ದ. ಇದೀಗ ಪತ್ನಿಯನ್ನು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಿದ್ದ 25 ವರ್ಷ ವಯಸ್ಸಿನ ಸೂರಜ್ ಎಂಬಾತ ದೋಷಿ ಎಂದು ಕೊಲ್ಲಂನ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಬುಧವಾರ ಆರೋಪಿಗೆ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ಕೋರ್ಟ್ ಹೇಳಿದೆ.

ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿರುವ ಅಪರೂಪದ ಪ್ರಕರಣ ಇದಾಗಿದೆ ಎಂದು ನ್ಯಾಯಾಲಯದ ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ತಿಳಿಸಿದ್ದಾರೆ.

ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ಪ್ರಕರಣಗಳ ತನಿಖೆ ಮಾಡುವುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ. ಈ ಕೊಲೆ ಪ್ರಕರಣವು ಅತ್ಯಂತ ಕಷ್ಟಕರವಾಗಿತ್ತು. ತನಿಖಾ ತಂಡವು ವಿಧಿವಿಜ್ಞಾನ ಪರೀಕ್ಷೆ, ಫೈಬರ್ ಡೇಟಾ ಮತ್ತು ಹಾವಿನ ಡಿಎನ್‌ ಎ ಪರೀಕ್ಷೆ ಸೇರಿ ಮುಂತಾದ ಸಾಂದರ್ಭಿಕ ಸಾಕ್ಷಿಗಳನ್ನು ಕಲೆ ಹಾಕಿ ಪ್ರಕರಣ ಭೇದಿಸಲು ತುಂಬಾ ಶ್ರಮಿಸಿದೆ ಎಂದು ಅವರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಕೆರೆಗೆ ಹಾರಿ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಕೆಲವರ ಹೆಸರು ಉಲ್ಲೇಖ

ಲಾಕಪ್ ನ ಚಿಲಕ ತೆಗೆದು ಪರಾರಿಯಾದ ಅತ್ಯಾಚಾರ ಆರೋಪಿ!

ರಾಜಕೀಯ ಅಂದ್ರೆ, ಜನರ ಮೇಲೆ ಫಾರ್ಚುನರ್‌ ಕಾರು ಹರಿಸುವುದಲ್ಲ | ತನ್ನ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡ!

ಭೂಮಿ ಕಂಪಿಸಿದ ಭಯಾನಕ ಅನುಭವ: ರಾತ್ರಿ ಇಡೀ ನಿದ್ದೆ ಮಾಡದೇ ದಿನ ಕಳೆದ ಜನ

ಜೋರು ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಬಡಿದ ಸಿಡಿಲು | ತಂದೆಯ ದಾರುಣ ಸಾವು

KSRTC ಬಸ್  ಮತ್ತು ಆಟೋ ಡಿಕ್ಕಿ: ಮದುಮಗ ಸೇರಿದಂತೆ ಮೂವರ ದಾರುಣ ಸಾವು

ಏರ್ ಇಂಡಿಯಾ ಟಾಟಾ ಸನ್ ಪ್ರೈವೇಟ್ ಲಿಮಿಟೆಡ್ ಪಾಲು | ಶೇ.100ರಷ್ಟು ಷೇರು ಮಾರಾಟ

ಇತ್ತೀಚಿನ ಸುದ್ದಿ