ಜ್ಯೂಸ್ ಮಾರುತ್ತಿದ್ದ ಮಹಿಳೆ ಈಗ ಕೇರಳ ವರ್ಕಾಲಾದ ಎಸ್ ಐ | ಇವರು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ
ತಿರುವನಂತಪುರಂ: ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗಿತ್ತು. ತನ್ನ 21ನೇ ವರ್ಷ ವಯಸ್ಸಿನಲ್ಲಿಯೇ ಗಂಡನಿಂದ ದೂರವಾದ ಮಹಿಳೆಯೊಬ್ಬರು, ಜೀವನ ನಿರ್ವಹಣೆಗಾಗಿ ಜ್ಯೂಸ್, ಐಸ್ ಕ್ರೀಂಗಳನ್ನು ಮಾರುತ್ತಾ ತಮ್ಮ ಕನಸನ್ನು ನನಸು ಮಾಡಿದ್ದು, ಇದೀಗ ಕೇರಳದ ವರ್ಕಾಲಾ ಪೊಲೀಸ್ ಠಾಣೆಯಲ್ಲಿ ಎಸ್ ಐ ಆಗಿ ಅಧಿಕಾರ ಸ್ವೀಕರಿಸುವ ಮೂಲಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
31 ವರ್ಷ ವಯಸ್ಸನ ಆ್ಯನಿ ಅವರಿಗೆ ತಮ್ಮ 18ನೇ ವಯಸ್ಸಿನಲ್ಲಿಯೇ ವಿವಾಹವಾಗಿತ್ತು. ಆ ಬಳಿಕ ಅವರಿಗೆ ಒಂದು ಮಗು ಕೂಡ ಇದೆ. ತಮ್ಮ 21ನೇ ವಯಸ್ಸಿನಲ್ಲಿ ಪತಿಯಿಂದ ದೂರವಾಗಿ ತಮ್ಮ ಅಜ್ಜಿ ಮನೆಯಲ್ಲಿ ವಾಸ ಮಾಡಲು ಆರಂಭಿಸಿದರು.
ಜೀವನ ನಿರ್ವಹಣೆಗಾಗಿ ಮನೆ ಮನೆಗಳಿಗೆ ಹೋಗಿ ಐಸ್ ಕ್ರೀಮ್ ಮಾರಾಟ ಮಾಡಿದರು. ತಮ್ಮ 31ನೇ ವಯಸ್ಸಿನಲ್ಲಿ ತನ್ನ ಕನಸ್ಸನ್ನು ನೆರವೇರಿಸಬೇಕು ಎಂದು ಅವರು ಪಣತೊಟ್ಟರು. ತಮ್ಮ ಮಗುವಿನ ಜೊತೆಗೆ ಸಿಂಗಲ್ ರೂಮ್ ಹುಡುಕಲು ಕೂಡ ಅವರು ಸಾಕಷ್ಟು ಕಷ್ಟಪಟ್ಟಿದ್ದರು.
ಆ್ಯನಿ ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರಿಂದಾಗಿ ಅವರ ಪೋಷಕರು ಕೂಡ ಅವರನ್ನು ಮನೆಗೆ ಸೇರಿಸಿಕೊಳ್ಳಲಿಲ್ಲ. ಆದರೆ ಇಂತಹ ಸಾಕಷ್ಟು ಸಮಸ್ಯೆಗಳು ಬಂದರೂ ಅವರು ಹಿಂದೆ ಸರಿಯಲಿಲ್ಲ. ಸಣ್ಣಪುಟ್ಟ ಉದ್ಯಮಗಳನ್ನು ಮಾಡಿ ವಿಫಲವಾದಾಗ ಅವರು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗುವ ಕನಸು ಹೊತ್ತರು. 2016ರಲ್ಲಿ ಸಬ್ ಇನ್ಸ್ ಪೆಕ್ಟರ್ ಎಕ್ಸಾಂ ತೆಗೆದುಕೊಂಡರು. ಲೋನ್ ಮಾಡಿಕೊಂಡು ಎಕ್ಸಾಂಗೆ ಎಲ್ಲ ತಯಾರಿಯನ್ನು ಮಾಡಿಕೊಂಡರು. ಎಕ್ಸಾ ಬರೆದು ಕ್ಲೀಯರ್ ಕೂಡ ಮಾಡಿದ್ದಾರೆ. ಆ ಬಳಿಕ ಒಂದೂವರೆ ವರ್ಷದ ನಂತರ ಟ್ರೈನಿಂಗ್ ಮುಗಿಸಿ ಇದೀಗ ಕೇರಳದ ವರ್ಕಾಲಾ ಎಸ್ ಐ ಆಗಿದ್ದಾರೆ.
ಬಾಬ್ ಕಟ್ ಮಾಡಿಕೊಂಡು ತಮ್ಮನ್ನು ಸಂಪೂರ್ಣವಾಗಿ ಆ್ಯನಿ ಬದಲಿಸಿಕೊಂಡಿದ್ದಾರೆ. ಇದೀಗ ಇವರ ಸ್ಟೋರಿ ಕೇಳಿ ಇವರ ಶ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜೀವನದಲ್ಲಿ ಯಾವುದೇ ಅಡೆತಡೆಗಳು ಬಂದರೂ ತಾಳ್ಮೆಯಿಂದ ಎದುರಿಸಿದ ಆ್ಯನಿ ಎಲ್ಲರಿಗೂ ಮಾದರಿಯಾಗಿದ್ದಾರೆ.