ವಿದ್ಯಾವಂತರ ನಾಡು ಕೇರಳದಲ್ಲಿ ಲಾಕ್ ಡೌನ್ ಘೋಷಣೆ
ತಿರುವನಂತಪುರಂ: ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾವಂತರ ನಾಡು ಕೇರಳದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ 16ರವರೆಗೆ ಕೇರಳ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಬುಧವಾರ ಕೇರಳದಲ್ಲಿ 41,953 ಹೊಸ ಕೊವಿಡ್ ಪ್ರಕರಣಗಳೂ ಪತ್ತೆಯಾಗಿದ್ದು,ಇದು ಕೇರಳದಲ್ಲಿ ಇಲ್ಲಿಯವರೆಗೆ ದಾಖಲಾದ ಪ್ರಕರಣಗಳಲ್ಲಿಯೇ ದಾಖಲೆಯಾಗಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್ ಡೌನ್ ಘೋಷಿಸಿದೆ.
ಕಳೆದ ವರ್ಷವೂ ಕೇರಳದಲ್ಲಿ ಕೊವಿಡ್ ನಿಯಂತ್ರಣಕ್ಕೆ ಇಡೀ ದೇಶದಲ್ಲಿಯೇ ಯಾವುದೇ ರಾಜ್ಯ ತೆಗೆದುಕೊಳ್ಳದಂತಕ ಕ್ರಮಗಳನ್ನು ಕೇರಳದಲ್ಲಿ ತೆಗೆದುಕೊಳ್ಳಲಾಗಿತ್ತು. ಕೇರಳದಲ್ಲಿ ಒಬ್ಬನೇ ಒಬ್ಬ ಹಸಿವಿನಿಂದ ಸತ್ತ ಉದಾಹರಣೆ ಇಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಯಾರು ಕೂಡ ಹಸಿವಿನಿಂದ ಸಾಯಬಾರದು ಎಂದು ಕಳೆದ ಬಾರಿ ಪಿಣರಾಯಿ ವಿಜಯನ್ ಘೋಷಿಸಿದ್ದರು.
ಈ ಬಾರಿ ಲಾಕ್ ಡೌನ್ ನ ಜೊತೆಗೆ ಕೊರೊನಾ ಲಸಿಕೆ ವಿತರಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಳೆದ ಬಾರಿಯೂ ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕ್ರಮಗಳ ಮಾದರಿಯಾಗಿದ್ದವು. ಈ ಬಾರಿ ಚುನಾವಣೆಯಲ್ಲಿ ಗೆದ್ದ ಉತ್ಸಾಹದಲ್ಲಿರು ಪಿಣರಾಯಿ ವಿಜಯನ್ ಲಾಕ್ ಡೌನ್ ಅವಧಿಯಲ್ಲಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.