ಕೇರಳದಲ್ಲಿ ನಾಲ್ವರು ಮಹಿಳೆಯರ ಸಹಿತ ಮತ್ತೆ 5 ಮಂದಿಯಲ್ಲಿ ಝಿಕಾ ವೈರಸ್ ಪತ್ತೆ!
ತಿರುವನಂತಪುರಂ: ಕೇರಳದಲ್ಲಿ ಮತ್ತೆ 5 ಮಂದಿಗೆ ಝಿಕಾ ವೈರಸ್ ಪತ್ತೆಯಾಗಿದೆ. ನಾಲ್ವರು ಮಹಿಳೆಯರು ಸೋಂಕಿಗೆ ಗುರಿಯಾಗಿದ್ದು, ರಾಜ್ಯದಲ್ಲಿ ಝಿಕಾ ವೈರಸ್ ಪೀಡಿತರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ.
ಹೊಸ ಪ್ರಕರಣಗಳ ಪೈಕಿ ಇಬ್ಬರು ಇಲ್ಲಿನ ಅನಾಯರಾ ಎಂಬ ಪ್ರದೇಶದವರಾಗಿದ್ದು, ಇಲ್ಲಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಝಿಕಾ ವೈರಸ್ ನ ಕ್ಲಸ್ಟರ್ ನ್ನು ಗುರುತಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇನ್ನುಳಿದ ಸೋಂಕಿತರು ಈಸ್ಟ್ ಫೋರ್ಟ್, ಕುನ್ನುಕುಳಿ ಹಾಗೂ ಪಟ್ಟೋಮ್ ನ ನಿವಾಸಿಗಳಾಗಿದ್ದು ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ರೋಗಿಗಳ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ನಾಲ್ಕು ಮಾದರಿಗಳನ್ನು ಖಾಸಗಿ ಆಸ್ಪತ್ರೆಯಿಂದ ಸಂಗ್ರಹಿಸಿ ಕೊಂಡೊಯ್ಯಲಾಗಿದ್ದರೆ, ಒಂದನ್ನು ಆರೋಗ್ಯ ಇಲಾಖೆ ನಿಗಾ ವಹಿಸಿ ಸಂಗ್ರಹಿಸಿ ಕಳಿಸಿಕೊಟ್ಟಿದೆ.
16 ಮಾದರಿಗಳ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು, ಕೇರಳದಲ್ಲಿ ಒಟ್ಟು ಝಿಕಾ ಪ್ರಕರಣಗಳ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಕ್ಲಸ್ಟರ್ ಪ್ರದೇಶದಲ್ಲಿ ಝೀಕಾ ವೈರಸ್ ಹರಡುವುದನ್ನು ತಡೆಗಟ್ಟಲು ಸೊಳ್ಳೆಗಳ ನಿರ್ನಾಮಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನಷ್ಟು ಸುದ್ದಿಗಳು:
ದೇಶದಲ್ಲೇ ಮೊದಲ ಬಾರಿಗೆ ಪತ್ತೆಯಾಯ್ತು ಝಿಕಾ ವೈರಸ್: ಸೊಳ್ಳೆಗಳಿಂದ ಹರಡುವ ಈ ವೈರಸ್ ನ ಲಕ್ಷಣಗಳೇನು ಗೊತ್ತಾ?
ಬೆಚ್ಚಿಬೀಳಿಸಿದ ಘಟನೆ | ಕುಟುಂಬಸ್ಥರ ಎದುರೇ 16ರ ಬಾಲಕಿಯ ಮೇಲೆ 8 ಮಂದಿಯಿಂದ ಸಾಮೂಹಿಕ ಅತ್ಯಾಚಾರ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ | ಜನ ಜೀವನ ಅಸ್ತವ್ಯಸ್ಥ
ರಾಜಕೀಯಕ್ಕೆ ಕಾಲಿಡುತ್ತಾರಾ ರವಿ ಡಿ.ಚೆನ್ನಣ್ಣನವರ್? | ಏನಿದು ಹೊಸ ಚರ್ಚೆ?
ಇನ್ ಸ್ಟಾಗ್ರಾಮ್ ಪರಿಚಯವಾದಾತನಿಂದ ವಿವಾಹಿತ ಮಹಿಳೆಯ ಅತ್ಯಾಚಾರ!