ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್ - Mahanayaka

ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈಅಲಾರ್ಟ್

nipah virus
07/09/2021


Provided by

ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೇರಳ ಗಡಿ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು,  ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸೆ.3ರಂದು ಕೇರಳದ ಕೋಝಿಕ್ಕೋಡ್ ನಲ್ಲಿ 12 ವರ್ಷ ವಯಸ್ಸಿನ ಬಾಲಕ ನಿಫಾ ವೈರಸ್ ಗೆ ಬಲಿಯಾಗಿರುವ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಕೂಡ ಹೈಅಲಾರ್ಟ್ ಘೋಷಿಸಲಾಗಿದೆ. ಕೇರಳದಿಂದ ಸಾಕಷ್ಟು ಮಂದಿ ದಕ್ಷಿಣ ಕನ್ನಡಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಎಚ್ಚರಿಸಲಾಗಿದೆ.

ಸಾರ್ವಜನಿಕರು ಸಾಬೂನು ಹಾಗೂ ನೀರಿನಿಂದ ಪದೇ ಪದೇ ಕೈತೊಳೆಯುವುದು, ಸೋಂಕ ಹರಡುವಂತಹ ಬಾವಲಿ, ಹಂದಿಯಿಂದ ದೂರವಿರುವುದು. ಪ್ರಾಣಿ ಪಕ್ಷಿಗಳು ತಿಂದು ಬಿಟ್ಟ ಹಣ್ಣುಗಳನ್ನು ತಿನ್ನಬಾರದು.  ಸೋಂಕಿತ ವ್ಯಕ್ತಿಯ ದೇಹದ ದ್ರವಗಳಿಂದಲೂ  ರೋಗ ಹರಡುವ ಹಿನ್ನೆಲೆಯಲ್ಲಿ ದೈಹಿಕ ಅಂತರ ಕಾಪಾಡುವ ಮೂಲಕ ಎಚ್ಚರಿಸವಹಿಸಬೇಕು ಎಂದು ಸೂಚಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

 

ನಿಫಾ ವೈರಸ್ ನ ರೋಗ ಲಕ್ಷಣಗಳೇನು ಗೊತ್ತಾ? | ರೋಗಿ ಕೋಮಾಕ್ಕೆ ಹೋಗುವ ಸಾಧ್ಯತೆ ಹೆಚ್ಚು!

ತರಗತಿ ಆರಂಭವಾದ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ 10 ದಿನ ದಸರ ರಜೆ!

“ಬ್ರಾಹ್ಮಣರನ್ನು ನಮ್ಮ ಗ್ರಾಮಗಳಿಗೆ ಬರಲು ಬಿಡಬಾರದು” ಎಂದಿದ್ದ ಛತ್ತೀಸ್ ಗಢ ಸಿಎಂ ತಂದೆ ನಂದ ಕುಮಾರ್ ಬಘೇಲ್ ಜೈಲು ಪಾಲು!

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು!

ಇತ್ತೀಚಿನ ಸುದ್ದಿ