ಕೇರಳಕ್ಕೆ ಕಾಲಿಟ್ಟ ತೌಕ್ತೆ ಚಂಡಮಾರುತ ಮೊದಲ ಏಟಿಗೆ ಉರುಳಿ ಬಿದ್ದ ಮರಗಳು - Mahanayaka

ಕೇರಳಕ್ಕೆ ಕಾಲಿಟ್ಟ ತೌಕ್ತೆ ಚಂಡಮಾರುತ ಮೊದಲ ಏಟಿಗೆ ಉರುಳಿ ಬಿದ್ದ ಮರಗಳು

tauktae cyclone
14/05/2021

ಕೊಲ್ಲಂ: ತೌಕ್ತೆ ಚಂಡಮಾರುತ ಕೇರಳದಲ್ಲಿ ಅಬ್ಬರಿಸಲು ಆರಂಭಿಸಿದ್ದು,  ಕೇರಳದ ಕೊಲ್ಲಂನ  ಶಕ್ತಿಕುಂಗರದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಮರಗಳು ಗಾಳಿಯ ವೇಗಕ್ಕೆ ಉರುಳಿ ಬಿದ್ದಿದ್ದು, ಪರಿಣಾಮವಾಗಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.


Provided by

ಕೇರಳದಲ್ಲಿ ಭಾರೀ ಮಳೆ ಆರಂಭಗೊಂಡಿದೆ. ನಾಳೆ ಮುಂಜಾನೆಯ ವೇಳೆಗೆ ಕರ್ನಾಟಕದಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲವಾದ ಗಾಳಿ ಬೀಸಲು ಆರಂಭವಾಗಿದೆ.

ಕೇರಳದಲ್ಲಿ ಚಂಡಮಾರುತದ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಸರ್ಕಾರ ಅಗತ್ಯ ಎಚ್ಚರಿಕೆಗಳನ್ನು ನೀಡಿದೆ. ಮಳೆಯ ಸಂದರ್ಭದಲ್ಲಿ ಮರಗಳ ಕೆಳಗಡೆ ನಿಲ್ಲಬೇಡಿ, ವಾಹನಗಳನ್ನು ಮರದ ಕೆಳಗೆ ಪಾರ್ಕ್ ಮಾಡಬೇಡಿ,  ಮನೆಗಳ ಟೆರೇಸ್ ನಲ್ಲಿ ನಿಲ್ಲುವುದನ್ನು ಆದಷ್ಟು ಕಡಿಮೆ ಮಾಡಿ. ಅಸುರಕ್ಷಿತ ಜಾಹೀರಾತು ಫಲಕಗಳನ್ನು, ವಿದ್ಯುತ್ ಪೋಸ್ಟ್ ಗಳು, ಧ್ವಜಸ್ತಂಭಗಳನ್ನು ಗಟ್ಟಿಗೊಳಿಸಲು ರಾಜ್ಯಾದ್ಯಂತ ಆದೇಶ ನೀಡಲಾಗಿದೆ.


Provided by

ಶಿಥಿಲವಾದ ಹಾಳೆಗಳಲ್ಲಿ ಮುಚ್ಚಲಾಗಿದ್ದ ಮನೆಗಳಲ್ಲಿ ವಾಸಿಸುವವರು ತಕ್ಷಣವೇ ಅಧಿಕಾರಿಗಳನ್ನು ಸಂಪರ್ಕಿಸಲು ಹೇಳಲಾಗಿದೆ. ಇನ್ನೂ ಗಾಳಿ ಬೀಸುವ ಸಂದರ್ಭದಲ್ಲಿ ಮನೆಗಳ ಕಿಟಕಿಗಳನ್ನು ಮುಚ್ಚಿ, ಬಾಗಿಲುಗಳನ್ನು ಕೂಡ ಗಟ್ಟಿಯಾಗಿ ಮುಚ್ಚುವಂತೆ ಸಲಹೆ ನೀಡಲಾಗಿದೆ. ಗೋಡೆಯ ಬದಿಗಳಲ್ಲಿ ವಾಲುವಂತಹ ಏಣಿ ಮೊದಲಾದ ವಸ್ತುಗಳನ್ನು ಇಡಬೇಡಿ. ಒಂದು ವೇಳೆ ಅದನ್ನು ಇಡಲೇ ಬೇಕಿದ್ದರೆ, ಗಟ್ಟಿಯಾಗಿ ಕಟ್ಟಿ ಇಡುವಂತೆ ಸೂಚಿಸಲಾಗಿದೆ.

ಇನ್ನೂ ಮುಂಜಾನೆ ಕೆಲಸಕ್ಕೆ ಹೋಗುವವರು, ಪತ್ರಿಕೆ ಮತ್ತು ಹಾಲು ವಿತರಕರು ವಿಶೇಷವಾಗಿ ಜಾಗರೋಕರಾಗಬೇಕು. ರಸ್ತೆಗಳಲ್ಲಿ ಪ್ರವಾಹ ಸಂಭವಿಸಿರಬಹುದು, ಭೂಕುಸಿತದ ಸಾಧ್ಯತೆಗಳಿರಬಹುದು., ರಸ್ತೆಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರಬಹುದು. ರಸ್ತೆ ಸರಿಯಾಗಿ ಕಾಣಿಸದ ಸ್ಥಿತಿ ಇದ್ದರೆ ತೀವ್ರ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಮನವಿ ಮಾಡಲಾಗಿದೆ. ವಿಶೇಷವಾಗಿ ತೀವ್ರ ಗುಡುಗು, ಗಾಳಿ ಮಳೆ ಇದ್ದರೆ, ಮನೆಯಂದ ಹೊರಬಾರದೇ ಮನೆಯೊಳಗೆ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ. ಕೇರಳದಲ್ಲಿ ಸರ್ಕಾರವು ಜನರಿಗೆ ಇಷ್ಟೆಲ್ಲ ಎಚ್ಚರಿಕಾ ಕ್ರಮಗಳನ್ನು ಹೇಳಿದೆ.

ಇತ್ತೀಚಿನ ಸುದ್ದಿ