ಬಿಜೆಪಿಯ ನಡೆಯಿಂದ ನೊಂದು ಪರಿಹಾರ ಬೇಡ ಎಂದ ಕೇರಳದ ಅಜೀಶ್ ಕುಟುಂಬ!
ವಯನಾಡು: ಕರ್ನಾಟಕದ ಮಖ್ನಾ ಆನೆಯ ದಾಳಿಗೆ ಬಲಿಯಾಗಿದ್ದ ಕೇರಳದ ಪದಮಲ ಮೂಲದ ಅಜೀಶ್ ಅವರ ಕುಟುಂಬವು ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂಪಾಯಿ ಪರಿಹಾರವನ್ನು ಪಡೆದುಕೊಳ್ಳಲು ನಿರಾಕರಿಸಿದೆ.
ಮೃತರ ಕುಟುಂಬಸ್ಥರಿಗೆ ಕರ್ನಾಟಕ ಸರ್ಕಾರ ಪರಿಹಾರ ನೀಡುವ ವಿಚಾರದಲ್ಲಿ ಸದನದಲ್ಲಿ ಬಿಜೆಪಿ ಸೃಷ್ಟಿಸಿದ ಗದ್ದಲದಿಂದ ನೊಂದು ಕುಟುಂಬ ಪರಿಹಾರ ಪಡೆದುಕೊಳ್ಳಲು ನಿರಾಕರಿಸಿದೆ ಎಂದು ಹೇಳಲಾಗಿದೆ.
ಪರಿಹಾರದ ವಿಚಾರದಲ್ಲಿ ಬಿಜೆಪಿ ನಡೆದುಕೊಂಡ ರೀತಿಯನ್ನು ಅಜೀಶ್ ಕುಟುಂಬವು ಅಮಾನವೀಯ ಎಂದು ಬಣ್ಣಿಸಿದೆ.
ಫೆಬ್ರವರಿ 10ರಂದು ಕರ್ನಾಟಕದ ಮಖ್ನಾ ಆನೆ ಕೇರಳದ ವಯನಾಡಿನಲ್ಲಿ ಅಜೀಶ್ ಅವರನ್ನು ತುಳಿದು ಕೊಂದಿತ್ತು. ಆನೆಗೆ ಕರ್ನಾಟಕ ಸರ್ಕಾರ ರೆಡಿಯೋ ಕಾಲರ್ ಅಳವಡಿಕೆ ಕೂಡ ಮಾಡಿತ್ತು. ಹೀಗಾಗಿ ಕರ್ನಾಟಕ ಸರ್ಕಾರ ಅಜೀಶ್ ಕುಟುಂಬಕ್ಕೆ ಪರಿಹಾರ ಘೋಷಿಸಬೇಕಾಯಿತು.
ಆದರೆ, ರಾಹುಲ್ ಗಾಂಧಿ ಒತ್ತಡದಿಂದಾಗಿ ಕರ್ನಾಟಕದಿಂದ ಪರಿಹಾರ ನೀಡಲಾಗಿದೆ ಎನ್ನುವುದು ಸೇರಿದಂತೆ ಹಲವು ಆರೋಪಗಳನ್ನು ಮುಂದಿಟ್ಟು ಬಿಜೆಪಿ ಸದನದಲ್ಲಿ ಗದ್ದಲ ನಡೆಸಿತ್ತು.
ಬಿಜೆಪಿ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರಿಂದ ನೊಂದ ಅಜೀಶ್ ಕುಟುಂಬ, ವಿವಾದದ ಹಣ ನಮಗೆ ಬೇಡ ಎಂದು ನಿರ್ಧರಿಸಿದ್ದು, ಪರಿಹಾರ ಪಡೆದುಕೊಳ್ಳಲು ನಿರಾಕರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth