ಕೇರಳದ ಡಾನ್ ಕೊಲೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ಆರೋಪಿ ​ ಅನುಮಾನಾಸ್ಪದ ಸಾವು - Mahanayaka
11:36 PM Wednesday 5 - February 2025

ಕೇರಳದ ಡಾನ್ ಕೊಲೆ ಪ್ರಕರಣ: ಹಿಂಡಲಗಾ ಜೈಲಿನಲ್ಲಿ ಆರೋಪಿ ​ ಅನುಮಾನಾಸ್ಪದ ಸಾವು

keralla
05/02/2022

ಬೆಳಗಾವಿ: ಕೇರಳದ ಕುಖ್ಯಾತ ರೌಡಿ ಡಾನ್​ ತಸ್ಲಿಮ್ ಕೊಲೆ ಪ್ರಕರಣದ ಆರೋಪಿ ಗುರುರಾಜ್ ದೊಡ್ಡಮನಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.‌

ಗುರುರಾಜ್​ ಸಾವಿಗೆ ಜೈಲು ಸಿಬ್ಬಂದಿಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 2019ರಲ್ಲಿ ಕೇರಳದ ಕುಖ್ಯಾತ ರೌಡಿ ಡಾನ್​ ತಸ್ಲಿಮ್​ನ ಕೊಲೆ ಕೇಸ್​ನಲ್ಲಿ ಗುರುರಾಜ್ ದೊಡ್ಡಮನಿ ಜೈಲುಪಾಲಾಗಿದ್ದ. ಕಳೆದ ನಾಲ್ಕು ದಿನಗಳಿಂದ ಗುರುರಾಜ್​ಗೆ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಗುರುರಾಜ್​ ತನ್ನ ಸಂಬಂಧಿಯೊಬ್ಬರಿಗೆ ಶುಕ್ರವಾರ ತಿಳಿಸಿ 500 ರೂ. ಕೊಡುವಂತೆ ಹೇಳಿದ್ದನಂತೆ. ಇದಾದ ಕೆಲವೇ ಗಂಟೆಗಳಲ್ಲಿ ಅಂದರೆ ಶುಕ್ರವಾರ ಸಂಜೆ ಗುರುರಾಜ್​ ಮೃತಪಟ್ಟಿದ್ದಾನೆ ಎಂದು ಜೈಲಿನಿಂದ ಸಂಬಂಧಿಕರಿಗೆ ಕರೆ ಬಂದಿತ್ತು.

15 ದಿನಗಳ ಹಿಂದೆ ಗುರುರಾಜ್ ಮೇಲೆ ಜೈಲಿನಲ್ಲಿ ಹಲ್ಲೆ ನಡೆದಿತ್ತು. ಇದಾದ ಬಳಿಕ ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಮೃತನ ಸಹೋದರ ಕಿರಣ್ ಆರೋಪಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗಾನಕೋಗಿಲೆ ಲತಾ ಮಂಗೇಶ್ಕರ್‌ ಸ್ಥಿತಿ ಗಂಭೀರ

ಯುವತಿಗೆ ಮೆಸೇಜ್​ ಮಾಡಿದ್ದಕ್ಕೆ ಯುವಕನ ಕೊಲೆಗೆ ಯತ್ನ: ನಾಲ್ವರು ಆರೋಪಿಗಳ ಬಂಧನ

ಹಿರಿಯ ಛಾಯಾಗ್ರಾಹಕ ಡಿ.ಸಿ.ನಾಗೇಶ್ ನಿಧನ

ಪೌತಿ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ: ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ

ಹಿಜಾಬ್​ ವಿವಾದ: ತಾಯಿ ಸರಸ್ವತಿ ಎಲ್ಲರಿಗೂ ಒಳ್ಳೆಯ ಬುದ್ದಿ ಕೊಡಲಿ: ರಾಹುಲ್​ ಗಾಂಧಿ

 

ಇತ್ತೀಚಿನ ಸುದ್ದಿ