ಕೆರೆಗೆ ತಾವರೆಗಿಡ ಹಾಕಲು ಹೋದ ವಿದ್ಯಾರ್ಥಿನಿಯ ದಾರುಣ ಸಾವು!

shreya
15/11/2021

ನೆಲ್ಯಾಡಿ:  ವಿದ್ಯಾರ್ಥಿನಿಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಕೊಣಾಲು ಗ್ರಾಮದ ಅಂಬರ್ಟೆ ಎಂಬಲ್ಲಿ  ನಡೆದಿದ್ದು, ಕೆರೆಗೆ ತಾವರೆ ಗಿಡ ಹಾಕಲು ಹೋದ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಅಂಬರ್ಟೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿ ಪುತ್ರಿ 18 ವರ್ಷ ವಯಸ್ಸಿನ ಶ್ರೇಯಾ ಮೃತಪಟ್ಟ ಯುವತಿ ಎಂದು ಹೇಳಲಾಗಿದ್ದು, ಈಕೆ  ಇಲ್ಲಿನ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಬೆಳಗ್ಗೆ ತಮ್ಮ ಮನೆಯ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದು, ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಕೆರೆ ಬಳಿ ಹೋಗಿ ಬಹಳಷ್ಟು ಹೊತ್ತಾದರೂ ಮರಳದ ಹಿನ್ನೆಲೆಯಲ್ಲಿ  ಮನೆಯವರು ಕೆರೆಯ ಬಳಿ ಹೋಗಿ ನೋಡಿದಾಗ ಶ್ರೇಯಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ ಘಟನೆ ಸಂಬಂಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು | ಕ್ಷಮೆಯಾಚಿಸಿದ ಹಂಸಲೇಖ

ಎಚ್ಚರ…! ನೀವು ನಿದ್ದೆ ಕೆಡುತ್ತಿದ್ದೀರಾ? | ಹಾಗಿದ್ದರೆ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು!

ದಲಿತರ ಮನೆಗೆ ಪೇಜಾವರ ಶ್ರೀ ಬರಬಹುದು ಆದ್ರೆ ಕೋಳಿ ತಿನ್ನಕ್ಕಾಗುತ್ತಾ? | ಹಂಸಲೇಖ ಪ್ರಶ್ನೆಗಳ ಬಾಣ

ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಗ್ಯದಲ್ಲಿ ಏರುಪೇರು

ದೇವರ ಪ್ರಸಾದ ಸೇವಿಸಿ ವಾಂತಿ ಭೇದಿ | 25ರಿಂದ 30 ಭಕ್ತರು ಅಸ್ವಸ್ಥ

ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಶಾಲೆಗಳಿಗೆ ರಜೆ

ಇತ್ತೀಚಿನ ಸುದ್ದಿ

Exit mobile version