ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪಿ ಎಸ್ ಐ ಖಡಕ್‌ ಎಚ್ಚರಿಕೆ - Mahanayaka
3:05 AM Wednesday 27 - November 2024

ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಪಿ ಎಸ್ ಐ ಖಡಕ್‌ ಎಚ್ಚರಿಕೆ

kesari
04/02/2022

ಬೆಳಗಾವಿ: ರಾಜ್ಯದ ಕರಾವಳಿ ಪ್ರದೇಶಕ್ಕೆ ಸೀಮಿತವಾಗಿದ್ದ ಹಿಜಾಬ್ ವಿವಾದ ಇದೀಗ ಕುಂದಾನಗರಿಗೂ ಕಾಲಿಟ್ಟಿದ್ದು, ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪಿಎಸ್ ಐ ಎಚ್ಚರಿಕೆ ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದೆ.

ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಂತೆ ಮಾಹಿತಿ ಪಡೆದ ಪೊಲೀಸರು ಕಾಲೇಜು ಆವರಣಕ್ಕೆ ದೌಡಾಯಿಸಿದ್ದು, ವಿದ್ಯಾರ್ಥಿಗಳ ಕೊರಳಲ್ಲಿದ್ದ ಶಾಲು ತೆಗೆಸಿದ್ದಾರೆ. ಅಲ್ಲದೆ, ಶಾಲಾ ಆವರಣದಲ್ಲಿ ಶಾಲು ಧರಿಸದಂತೆ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ನಿನ್ನೆ ನಡೆದಿದ್ದ ಈ ಘಟನೆಯನ್ನ ಮುಚ್ಚಿ ಹಾಕಲು ಯತ್ನ ನಡೆದಿದೆ. ಇಡೀ ದಿನ ಹರಸಾಹಸ ಪಟ್ಟು ವಿದ್ಯಾರ್ಥಿಗಳ ಕೊರಳಲ್ಲಿದ್ದ ಕೇಸರಿ ಶಾಲು ತೆಗೆಸಲಾಗಿದೆ.

ಕಾಲೇಜಿಗೆ ಸಂಬಂಧ ಇಲ್ಲದ ಯುವಕರು ವಿವಾದ ಸೃಷ್ಟಿಸುತ್ತಿದ್ದಾರೆ. ಈ ರೀತಿ ಮುಂದೆ ಕಾಲೇಜಿಗೆ ಬಾರದಂತೆ ಯುವಕರಿಗೆ ಪಿಎಸ್ ಐ ಎಚ್ಚರಿಕೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗರ್ಭಿಣಿಯನ್ನು ಬೈಕ್ ​​ನಲ್ಲಿ ​​ ಕರೆತಂದ ಪತಿ: ಆಸ್ಪತ್ರೆ ಮುಂಭಾಗದಲ್ಲೇ ಹೆರಿಗೆ

ಸ್ಥಳೀಯ ಚುನಾವಣೆ: ಬಿಜೆಪಿಯಿಂದ ತೃತೀಯ ಲಿಂಗಿಗಳಿಗೆ ಟಿಕೆಟ್

ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದಲೇ ಯುವಕನ ಕುಟುಂಬಕ್ಕೆ ಬಹಿಷ್ಕಾರ

ಬಿಜೆಪಿಗೆ ಬರುತ್ತೇನೆ ಅಂದ್ರೂ ಸಿಎಂ ಇಬ್ರಾಹಿಂ ಅವರನ್ನು ಸೇರಿಸಿಕೊಳ್ಳುವುದಿಲ್ಲ: ಸಚಿವ ಕೆ.ಎಸ್‌.ಈಶ್ವರಪ್ಪ

ಕಾರಿಗೆ ಗುಂಡು ಹಾರಿಸಿ ಓವೈಸಿಯ ಹತ್ಯೆಗೆ ಯತ್ನ!

 

ಇತ್ತೀಚಿನ ಸುದ್ದಿ