ಪ್ರತಿಭಟನೆಯ ಬಳಿಕ ಕೇಸರಿ ಪೇಟ ರಾಶಿ ಹಾಕುತ್ತಿರುವ ದೃಶ್ಯ ವೈರಲ್! - Mahanayaka
1:04 AM Wednesday 11 - December 2024

ಪ್ರತಿಭಟನೆಯ ಬಳಿಕ ಕೇಸರಿ ಪೇಟ ರಾಶಿ ಹಾಕುತ್ತಿರುವ ದೃಶ್ಯ ವೈರಲ್!

video
08/02/2022

ಹಿಜಾಬ್ ಧರಿಸುವ ವಿಚಾರವಾಗಿ ತಗಾದೆ ತೆಗೆದಿರುವ ವಿದ್ಯಾರ್ಥಿಗಳ ಗುಂಪೊಂದು ಇಂದು ಕೇಸರಿ ಪೇಟ ಹಾಗೂ ಶಾಲು ಧರಿಸಿ ಪ್ರತಿಭಟಿಸಿದ್ದವು. ಆದರೆ, ಪ್ರತಿಭಟನೆಯ ಬಳಿಕ ಪೇಟಗಳನ್ನು ಒಂದೆಡೆ ರಾಶಿ ಹಾಕುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏಕಾಏಕಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಗೂ ಕೇಸರಿ ಪೇಟ ಧರಿಸಿ ಪ್ರತಿಭಟನೆ ನಡೆಸಿದ್ದರು. ಮಧ್ಯಾಹ್ನದ ವೇಳೆಗೆ ವಿಡಿಯೋವೊಂದು ವೈರಲ್ ಆಗಿದ್ದು, “ಬೆಳಗ್ಗೆ ಉಚಿತವಾಗಿ ಸಿಕ್ಕಿದ್ದು, ಸಂಜೆ ಹೊತ್ತಿಗೆ ಫುಟ್ಪಾತ್ ಗೆ ಎಸೆದು ಹೋದರು” ಎಂಬ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ವಿದ್ಯಾರ್ಥಿಗಳು ಬಾಟಲಿ ನೀರು ಕುಡಿಯುತ್ತಾ,  ತಾವು ಧರಿಸಿದ್ದ ಕೇಸರಿ ಪೇಟವನ್ನು ತಂದು ರಾಶಿ ಹಾಕುತ್ತಿರುವುದು ಕಂಡು ಬಂದಿದೆ. ವಿಡಿಯೋ ಮಾಡಬೇಡಿ ಎಂದು ಕೆಲವರು ಕೂಗುತ್ತಿರುವ ಧ್ವನಿ ಕೂಡ ಕೇಳಿ ಬಂದಿದೆ.

ಇನ್ನೂ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ವಿದ್ಯಾರ್ಥಿಗಳನ್ನು ಛೂ ಬಿಟ್ಟು ವಿವಾಸ ಸೃಷ್ಟಿಸಲಾಗುತ್ತಿದೆ ಎನ್ನುವ ಚರ್ಚೆಗಳು ಆರಂಭವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಬ್ ಹಾಕಿಕೊಂಡು ಅಧಿವೇಶನಕ್ಕಲ್ಲ ಮೊದಲು ಮಸೀದಿಗೆ ಹೋಗಿ: ಸಚಿವ ಈಶ್ವರಪ್ಪ

ನದಿಯಗೆ ಕೈ ತೊಳೆಯಲು ತೆರಳಿದ ಯುವಕ ಮೊಸಳೆ ದಾಳಿಗೆ ಬಲಿ

ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಬಾವುಟ ಹಾರಿಸಿದ ವಿದ್ಯಾರ್ಥಿಗಳು!

ಬಿಎಸ್ ​ಪಿ ವರಿಷ್ಠೆ ಮಾಯಾವತಿಯಿಂದ ಪಂಜಾಬ್ ​ನಲ್ಲಿ ಚುನಾವಣಾ ರ‍್ಯಾಲಿ

ಪೈಪ್ ಲೈನ್ ಕಾಮಗಾರಿಗೆಂದು ಅಗೆದಿದ್ದ ಗುಂಡಿಯೊಳಗೆ ಬಿದ್ದು ಬಾಲಕಿ ಸಾವು

ಇತ್ತೀಚಿನ ಸುದ್ದಿ