ಕೆಜಿಎಫ್ 2 ಅಬ್ಬರಕ್ಕೆ ದಂಗಲ್ ಟೀಮ್ ಕಂಗಾಲ್! | ದಾಖಲೆ ಪುಡಿಗಟ್ಟಿದ ಸುಲ್ತಾನ
ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನ ಆದಿಪತ್ಯ ಕೊನೆಯಾಗುತ್ತಿದೆ ಎಂಬ ಚರ್ಚೆಗಳು ಶುರುವಾಗಿದೆ. ದಕ್ಷಿಣ ಭಾರತದ ಚಲನಚಿತ್ರಗಳು, ವಿಶೇಷವಾಗಿ ತೆಲುಗು ಚಲನಚಿತ್ರಗಳು ಮಾಡಿದ ನಿರಂತರ ಆರ್ಥಿಕ ಲಾಭಗಳು ಇದಕ್ಕೆ ಕಾರಣ. ಟಾಲಿವುಡ್ ನ ಅನೇಕ ದೊಡ್ಡ ಚಲನಚಿತ್ರಗಳ ಹಿಂದಿ ಭಾಷೆಯಲ್ಲಿಅಸಾಧಾರಣವಾಗಿ ಯಶಸ್ವಿಯಾಗಿತ್ತು. ಬಾಹುಬಲಿ ಫ್ರಾಂಚೈಸ್ ಕೇವಲ ಆರಂಭವಾಗಿದ್ದರೆ, ಅಲ್ಲು ಅರ್ಜುನ್ ಅವರ ಪುಷ್ಪ, ರಾಜಮೌಳಿ ನಿರ್ದೇಶನದ RRR ಮತ್ತು ಇದೀಗ ಕನ್ನಡ ಕೆಜಿಎಫ್ 2 ಹವಾಕ್ಕೆ ಬಾಲಿವುಡ್ ಕಂಪಿಸುವಂತಾಗಿದೆ.
ಇವೆಲ್ಲದರ ನಡುವೆಯೇ ಆಮಿರ್ ಖಾನ್ ನಟನೆಯ ‘ದಂಗಲ್’ ಚಿತ್ರದ ದಾಖಲೆಯನ್ನು ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಧೂಳಿಪಟ ಮಾಡಿದೆ. ಆ ಮೂಲಕ ಭಾರತದಲ್ಲಿ ಹಿಂದಿ ವರ್ಷನ್ನಿಂದ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2ನೇ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್ 2’ ಚಿತ್ರಕ್ಕೆ ಸಿಕ್ಕಿದೆ.
22ನೇ ದಿನವೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರತಿ ವೀಕೆಂಡ್ ನಲ್ಲಿ ಹೌಸ್ ಫುಲ್ ಆಗಿದೆ. ರಂಜಾನ್ ಇದ್ದಿದ್ದರಿಂದ ಅದರ ಪ್ರಯೋಜನವನ್ನೂ ಈ ಸಿನಿಮಾ ಪಡೆದುಕೊಂಡಿದೆ. 21 ದಿನಕ್ಕೆ ಹಿಂದಿಯಲ್ಲಿ ಈ ಸಿನಿಮಾ ಮಾಡಿರುವುದು ಬರೋಬ್ಬರಿ 391.65 ಕೋಟಿ ರೂಪಾಯಿ! ದಂಗಲ್ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ 387.38 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ 2ನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಕಿತ್ತುಕೊಂಡಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಸಿನಿಮಾ ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪತ್ನಿ ಮಗುವಿಗೆ ಬೆಂಕಿ ಹಚ್ಚಿ ಬಾವಿಗೆ ಹಾರಿದ ಪಾಪಿ ಪತಿ: ಮೂವರ ದುರಂತ ಸಾವು
ಕಿನ್ಯಾ ಗ್ರಾಮ ಪಂಚಾಯತ್ ನಿಂದ ದಲಿತರ ಕಡೆಗಣನೆ: ಪಂಚಾಯತ್ ಕಚೇರಿಯೆದುರು ಪ್ರತಿಭಟನೆ
ಕನ್ನಡ ಕೋಟ್ಯಾಧಿಪತಿಯಲ್ಲಿ ಸ್ಪರ್ಧಿಸಿದ್ದ ಲೈನ್ ಮೆನ್ ಆತ್ಮಹತ್ಯೆಗೆ ಶರಣು
ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್: ರಾಮ್ ಗೋಪಾಲ್ ವರ್ಮಾ
ಮತ್ತೊಮ್ಮೆ ಪ್ರಶಸ್ತಿ ಪಡೆದ “ಜೈ ಭೀಮ್” ಚಿತ್ರ: ಒಂದೇ ಸಮಾರಂಭದಲ್ಲಿ 2 ಪ್ರಶಸ್ತಿ!